Sunday, July 26, 2026
spot_imgspot_img
spot_imgspot_img

ಪರೇಶ್ ಮೆಸ್ತಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್

- Advertisement -
- Advertisement -

ಕಾರವಾರ : ದೇಶದಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಹೊನ್ನಾವರದ ಪರೇಶ್ ಮೆಸ್ತಾ ಸಾವು ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪರೇಶ್ ಮೇಸ್ತಾನದ್ದು ಕೊಲೆಯಲ್ಲ ಆಕಸ್ಮಿಕ ಸಾವು ಎಂದು ಹೊನ್ನಾವರದ ನ್ಯಾಯಾಲಯಕ್ಕೆ ಸಿಬಿಐ ವರದಿ ಸಲ್ಲಿಸಿದೆ. ಪರೇಶ್ ಮೇಸ್ತಾ ಸಾವಿನಲ್ಲಿ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ.

ಮರಣೋತ್ತರ ಪರೀಕ್ಷೆ ಸೇರಿ ವಿವಿಧ ವರದಿಗಳು ಮೇಸ್ತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆಂದು ಹೇಳುತ್ತಿವೆ ಎಂದು ಕೋರ್ಟ್‌ ಗೆ ಸಿಬಿಐ ಸಲ್ಲಿಸಿದ ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿ ಪರಿಶೀಲಿಸಿದ ಕೋರ್ಟ್ ತೀರ್ಪನ್ನು ನವೆಂಬರ್ 16 ಕ್ಕೆ ಮುಂದೂಡಿದೆ.

2017 ರ ಡಿಸೆಂಬರ್ 6 ರಂದು ಹೊನ್ನಾವರದಲ್ಲಿ ನಡೆದ ಗಲಭೆಯೊಂದು ಕೋಮುಸಂಘರ್ಷಕ್ಕೆ ತಿರುಗಿ ಘಟನಾ ಸ್ಥಳದಲ್ಲಿ ಪರೇಶ್ ಮೆಸ್ತಾ ಕಾಣೆಯಾಗಿದ್ದ. ಬಳಿಕ ಡಿಸೆಂಬರ್ 8 ರಂದು ನಗರದ ಶನಿ ದೇವಸ್ಥಾನದ ಹಿಂಭಾಗ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಮೃತದೇಹ ಪತ್ತೆಯಾಗಿತ್ತು.

- Advertisement -

Related news

error: Content is protected !!