- Advertisement -
- Advertisement -

ಮಂಗಳೂರು: ಮಂಗಳೂರಿನ ವೆಲೆನ್ಸಿಯ ನಿವಾಸಿ, ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದ ಜಿಶಾ ಜೋನ್ (27) ಅವರು ಪುಣೆಯ ಪಿಂಪ್ರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುವ ವೇಳೆ ಸ್ಕೂಟರ್‌ಗೆ ಟ್ರಕ್ ಢಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರು ಸಾವನ್ನಪ್ಪಿದರು. ಪತಿ ಪುಣೆಯಲ್ಲಿ ಉದ್ಯಮಿಯಾಗಿದ್ದರಿಂದ ಜಿಶಾ ಅವರು ಪುಣೆಯಲ್ಲಿ ನೆಲೆಸಿದ್ದರು.
ಮೃತ ಜಿಶಾ ಅವರು ಪತಿ, ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

- Advertisement -