Saturday, June 20, 2026
spot_imgspot_img
spot_imgspot_img

ಉಡುಪಿ: ಬೈಕ್‌ ಢಿಕ್ಕಿ ಹೊಡೆದು ಪಾದಾಚಾರಿ ಮಹಿಳೆ ಗಂಭೀರ..!

- Advertisement -
- Advertisement -

ಉಡುಪಿ: ರಸ್ತೆ ದಾಟುತ್ತಿದ್ದ ಮಹಿಳೆಯೋರ್ವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡಿದ್ದು ಸವಾರ ಪರಾರಿಯಾದ ಘಟನೆ ಉಡುಪಿಯ ಕಲ್ಸಂಕ ಸಮೀಪ ನಡೆದಿದೆ.

ಗಾಯಾಳು ಮಹಿಳೆಯನ್ನು ಸ್ಥಳೀಯ ನಿವಾಸಿ ಲಲಿತ ಆಚಾರ್ಯ ಎಂದು ಗುರುತಿಸಲಾಗಿದೆ.

ಅಂಬಾಗಿಲು- ಉಡುಪಿ ರಸ್ತೆಯ ಪಾಡಿಗಾರು ಎಂಬಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದರು. ಈಕೆಯನ್ನು ಗಮನಿಸಿದ ರಿಕ್ಷಾ ಚಾಲಕ ವೇಗ ಕಡಿಮೆ ಮಾಡಿದ್ದಾನೆ. ಆದರೆ ರಿಕ್ಷಾವನ್ನು ಓವರ್ ಟೆಕ್ ಮಾಡಿಕೊಂಡು ಅತಿವೇಗದಿಂದ ಬಂದ ಬೈಕ್ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಟ್ ಅಂಡ್ ರನ್ ಮಾಡಿದ ದ್ವಿಚಕ್ರ ವಾಹನ ಸವಾರನಿಗಾಗಿ ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

- Advertisement -

Related news

error: Content is protected !!