Thursday, February 2, 2023
spot_imgspot_img
spot_imgspot_img

ಪುತ್ತೂರು: ಭಾರತ್ ಸಿನಿಮಾಸ್ ನ 6ನೇ ಶಾಖೆ ಪುತ್ತೂರಿನ ಪ್ರತಿಷ್ಠಿತ ಜಿ.ಎಲ್ ಮಾಲ್ ನಲ್ಲಿ ಶುಭಾರಂಭ

- Advertisement -G L Acharya G L Acharya
- Advertisement -

ಪುತ್ತೂರು: ಮಲ್ಟಿ ಪ್ಲೆಕ್ಸ್ ಚಿತ್ರಮಂದಿರ ನಿರ್ಮಾಣದ ಮುಂಚೂಣಿಯಲ್ಲಿ ಇರುವ ಭಾರತ್ ಸಿನಿಮಾಸ್‌ನ 6ನೇ ಶಾಖೆ ಪುತ್ತೂರಿನ ಪ್ರತಿಷ್ಠಿತ ಜಿ.ಎಲ್ ಮಾಲ್ ನಲ್ಲಿ ಡಿ.21 ರಂದು ಉದ್ಘಾಟನೆಗೊಂಡಿತ್ತು . ಉದ್ಘಾಟನೆ ದಿನವೇ 3 ಪರದೆಗಳ ಪೈಕಿ 2 ಪರದೆಗಳಲ್ಲಿ ಪ್ರೀಮಿಯರ್ಶೋಗಳಾಗಿ ಕಾಂತಾರ ಮತ್ತು ದೃಶ್ಯಂ ಪ್ರದರ್ಶನಗೊಂಡವು. ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ಮಾಲಕ ಬಲರಾಮ್ ಆಚಾರ್ಯ ಅವರು ಭಾರತ್ ಸಿನಿಮಾಸ್ ನ 6ನೇ ಶಾಖೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿ.ಎಲ್ ಆರ್ಚಾರ್ಯ ಜ್ಯುವೆಲರ್ಸ್ ಮಾಲಕರ ಪತ್ನಿ ರಾಜಿ ಬಲರಾಮ ಆಚಾರ್ಯ, ಪುತ್ರರಾದ ಸುದನ್ವ ಆಚಾರ್ಯ, ಲಕ್ಷ್ಮೀ ಕಾಂತ್ ಆಚಾರ್ಯ, ಭಾರತ್ ಸಿನೆಮಾದ ನಿರ್ದೇಶಕರಾದ ಆನಂದ್ ಪೈ, ಸುಧೀರ್ ಪೈ, ಬಾಲಕೃಷ್ಣ ಶೆಟ್ಟಿ , ಸುಧಾ ಬಿ ಶೆಟ್ಟಿ , ಟೆಕ್ನಿಕಲ್ ಅಶ್ವಿನ್ ಪ್ರಭು, ಆ್ಯಡ್ ಲ್ಯಾ ಬ್ ನ ಪೊನ್ನಪ್ಪ , ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಮೆನೇಜರ್ ಕರುಣಾಕರ್ ಸಹಕರಿಸಿದರು.

ಸುಸಜ್ಜಿತ 3 ಪರದೆಗಳನ್ನು ಉಳ್ಳ ಈ ಚಿತ್ರಮಂದಿರ ಒಟ್ಟು 473 ಆರಾಮದಾಯಕ ಆಸನ , 2K ಡಿಜಿಟಲ್ ಪ್ರೊಜೆಕ್ಷನ್ , ಡಾಲ್ಬಿ ಡಿಜಿಟಲ್ ಸೌಂಡ್ , 3D ಪ್ಲೇ ಬ್ಯಾಕ್ ನೊಂದಿಗೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ, ಅತ್ಯಾಧುನಿಕ ಸೌಲಭ್ಯ ಮತ್ತು ಸುಂದರ ವಾಸ್ತು ವಿನ್ಯಾಸಗಳಿಂದ ನೂತನ ಮಲ್ಟಿ ಪ್ಲೆಕ್ಸ್ ಕಂಗೊಳಿಸುತ್ತಿದೆ. ಇಲ್ಲಿ ಆನ್ಲೈನ್ ಟಿಕೇಟಿಂಗ್ , ಕೌಂಟರ್ ಟಿಕೆಟ್ ಹಾಗೂ ಟೆಲಿ ಬುಕಿಂಗ್ ವ್ಯವಸ್ಥೆಯನ್ನು ಗ್ರಾಹಕರ ಅನುಕೂಲಕ್ಕಾಗಿ ಪರಿಚಯಿಸಲಾಗಿದೆ. ಇದು ಸಿನೆಮಾ ವೀಕ್ಷಣೆಯ ಉತ್ಕೃಷ್ಟ ಅನುಭವವನ್ನು ನೀಡಲಿದೆ. ಒಟ್ಟಾರೆ ಪುತ್ತೂರಿನ ಸಿನಿ ಪ್ರಿಯರ ಬಹುಕಾಲದ ನಿರೀಕ್ಷೆ ಸಾಕಾರವಾದಂತಾಗಿದೆ . ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ಚಿತ್ರಗಳ ಬಗ್ಗೆ ತಿಳಿಯಲು 8050253030 ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!