Monday, November 2, 2026
spot_imgspot_img
spot_imgspot_img

ಕಶೆಕೋಡಿಯಲ್ಲಿ ನಮೋ ಭಾರತ – ಭಾವ ಜಾಗರಣ ಅಭಿಯಾನ -ಭಜನೆ- ಭಾರತ ಮಾತಾ ಪೂಜನ, ಸಾಮರಸ್ಯ ಸಮಾಗಮ

- Advertisement -
- Advertisement -

ಭಾರತೀಯ ಸಂಸ್ಕೃತಿಯಲ್ಲಿ ಭಾವ, ಜಾಗರಣ, ಸಾಮರಸ್ಯಕ್ಕೆ ವಿಶೇಷ ಮಹತ್ವ: ಕಜಂಪಾಡಿ ಸುಬ್ರಹ್ಮಣ್ಯ ಭಟ್

ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು: ಸುರೇಖಾ ರಾಜ್

ಕಲ್ಲಡ್ಕ: ನಮೋ ಭಾರತ – ಭಾವ ಜಾಗರಣ ಅಭಿಯಾನದ ಅಂಗವಾಗಿ ಭಜನೆ – ಭಾರತ ಮಾತಾ ಪೂಜನ – ಸಾಮರಸ್ಯ ಸಮಾಗಮವು ನವೆಂಬರ್ 01, ಆದಿತ್ಯವಾರದಂದು ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಭಾರತ ಮಾತೆಗೆ ಪುಷ್ಪ ಸಮರ್ಪಿಸಿ ಚಾಲನೆ ನೀಡಿದರು. ಊರಿನ ಮತ್ತು ಪರ ಊರಿನ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸಭಾ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಶೆಕೋಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧಾಕರ್ ಶೆಣೈ ಮರೋಳಿ ವಹಿಸಿದ್ದರು.ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಗೋಪಾಲ ಶೆಣೈ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಸಂದೇಶವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಆಮಂತ್ರಿತ ಸದಸ್ಯರಾದ ಮಾನ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಮಾತೃ ಶಕ್ತಿ ಪ್ರಮುಖರಾದ ಶ್ರೀಮತಿ ಸುರೇಖಾ ರಾಜ್ ಅವರು ನೀಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಭಾವ, ಜಾಗರಣ, ಸಾಮರಸ್ಯಕ್ಕೆ ವಿಶೇಷ ಮಹತ್ವ: ಕಜಂಪಾಡಿ ಸುಬ್ರಹ್ಮಣ್ಯ ಭಟ್
ಭಾರತದ ಕುಟುಂಬ ವ್ಯವಸ್ಥೆಯನ್ನು ಅಮೆರಿಕದ ನೀಗ್ರೋ ಸಮುದಾಯದವರು ಅಧ್ಯಯನ ಮಾಡಿ ತಮ್ಮ ಕುಟುಂಬ ಪದ್ಧತಿಯನ್ನು ರೂಪಿಸಿಕೊಂಡಿದ್ದಾರೆ.ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ ಸಹಜವಾಗಿ ಬಂದದ್ದು. ಎಷ್ಟೇಲ್ಲಾ ಆಘಾತಗಳು ದೇಶದ ಮೇಲೆ ಆದರೂ, ಎಲ್ಲಾ ಆಘಾತಗಳನ್ನು ಸಮರ್ಥವಾಗಿ ಎದುರಿಸಿ ಮುಂದೆ ಹೋಗಿದ್ದೇವೆ. ಅದಕ್ಕೆ ಕಾರಣ ಮನೆಯಲ್ಲಿ ಸಿಕ್ಕಿದ ಶಿಕ್ಷಣ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಕುಟುಂಬ ಪ್ರಬೋಧನ ಯೋಜನೆ ಮಾಡಲಾಗಿದೆ. ಮನೆಗಳಲ್ಲಿ ಭಜನೆ ಮಾಡಿದಾಗ ಕುಟುಂಬ ಪ್ರಬುದ್ಧವಾಗುತ್ತದೆ. ವಾರದಲ್ಲಿ ಒಂದು ದಿವಸ ಭಜನೆಗೆ ಕುಳಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು: ಸುರೇಖಾ ರಾಜ್
ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು ಎಂದು ಭಾವಿಸಬೇಕು. ಭಾರತ ಒಂದು ನಕ್ಷೆಯಲ್ಲಿ ಕಾಣುವ ಚಿತ್ರವಲ್ಲ. ಭಾರತ ಅಂದರೆ ಭಾವನೆ, ಸಂಸ್ಕೃತಿ, ಸಾವಿರಾರು ವರ್ಷಗಳ ಸಂಘರ್ಷ, ಸಾವಿರಾರು ಪೂರ್ವಜರ ಪುಣ್ಯ ಮತ್ತು ಬಲಿದಾನ. ನಮ್ಮ ತಾಯಿ ನಮಗೆ ಏನು ಕೊಟ್ಟಿದ್ದಾಳೋ, ಅದಕ್ಕಿಂತ ನೂರು ಪಟ್ಟು ಜಾಸ್ತಿ ಭಾರತ ಮಾತೆ ನಮಗೆ ಕೊಟ್ಟಿದ್ದಾಳೆ. ನಮ್ಮ ಶಕ್ತಿ ಕೇವಲ ಸೈನ್ಯದಲ್ಲಿ ಇಲ್ಲ. ನಮ್ಮ ಶಕ್ತಿ ಇರುವುದು ನಮ್ಮ ಮನೆಗಳಲ್ಲಿ, ನಮ್ಮ ತಾಯಂದಿರಲ್ಲಿ, ನಮ್ಮ ಸಂಸ್ಕೃತಿಯಲ್ಲಿ. ಒಂದು ತಾಯಿ ಮನಸ್ಸು ಮಾಡಿದರೆ ಇಡೀ ಸಮಾಜವನ್ನೇ ಬದಲಿಸಬಹುದು. ಕುಟುಂಬವನ್ನು ರೂಪಿಸುವವಳು ತಾಯಿ. ಮಕ್ಕಳಿಗೆ ಸರಿಯಾದ ಸಂಸ್ಕಾರ, ಧರ್ಮ ಶಿಕ್ಷಣ ಸಿಗಬೇಕು. ಅದರಿಂದ ನಾವು ಈಗ ಎದುರಿಸುತ್ತಿರುವ ಲವ್ ಜಿಹಾದ್, ಮತಾಂತರದಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಸುರೇಖಾ ರಾಜ್ ಅವರು ಹೇಳಿದರು.

ಗೌರವ, ಸನ್ಮಾನ:
ರಿಕ್ಷಾ ವಿಶೇಷ ಸಾಧಕ ಸುಶಾಂತ್ ಸುವರ್ಣ ಮತ್ತು ದೈವ ನರ್ತಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲೋಕಯ್ಯ ಶೇರಾ ಅವರನ್ನು ಸನ್ಮಾನಿಸಲಾಯಿತು.

ಪ್ರೇರಣಾ ಗೀತೆಯನ್ನು ಗುರುಪ್ರಿಯ ಕಾಮತ್ ಮೆಲ್ಕಾರ್ ಪ್ರಸ್ತುತಪಡಿಸಿದರು.ಕಾರ್ಯಕ್ರಮವನ್ನು ರಾಧಾಕೃಷ್ಣ ಅಡ್ಯಂತಾಯ ಸ್ವಾಗತಿಸಿ , ಕುಮಾರಿ ದೀಕ್ಷಿತಾ ಮತ್ತು ಕುಮಾರಿ ಸ್ವಾತಿ ನಿರೂಪಿಸಿದರು.

- Advertisement -

Related news

error: Content is protected !!