Saturday, June 27, 2026
spot_imgspot_img
spot_imgspot_img

ಪುನೀತ್​ ನಿವಾಸಕ್ಕೆ ಆಗಮಿಸುತ್ತಿದ್ದ ನಟ ವಿಜಯ್ ಸೇತುಪತಿ ಮೇಲೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹಲ್ಲೆ

- Advertisement -
- Advertisement -

ಬೆಂಗಳೂರು: ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಿಜಯ್​ ಸೇತುಪತಿ ಅವರು ಏರ್ ಪೋರ್ಟ್ ನಲ್ಲಿ ಇಳಿದು ನಟ ಪುನೀತ್ ನಿವಾಸಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ವಿಜಯ್ ಸೇತುಪತಿ ಜೊತೆಗೆ ಬರುತ್ತಿದ್ದ ಸಹ ಪ್ರಯಾಣಿಕ ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ರಾತ್ರಿ 11 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆ ಸಂದರ್ಭದಲ್ಲಿ ವಿಜಯ್ ಸೇತುಪತಿಯ ಪಿಎಗೂ ಸಹ ಪ್ರಯಾಣಿಕನಿಗೂ ಜಗಳ ಆಗಿತಂತೆ. ಘಟನೆ ಬಳಿಕ ವಿಜಯ್ ಸೇತುಪತಿ ಪಿಎ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಸದ್ಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ವಿಜಯ್ ಸೇತುಪತಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಮಾಸ್ಟರ್ ಚೆಫ್ ರಿಯಾಲಿಟಿ ಶೋ ನ ಶೂಟಿಂಗ್​ಗಾಗಿ ಆಗಮಿಸಿದ್ದ ವಿಜಯ್ ಸೇತುಪತಿ, ಶೂಟಿಂಗ್ ಬಳಿಕ ಪುನೀತ್ ನಿವಾಸಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!