Monday, February 10, 2025
spot_imgspot_img
spot_imgspot_img

ಪೆರುವಾಯಿ: ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ 23ನೇ ವಾರ್ಷಿಕೋತ್ಸವ-ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ- ಧಾರ್ಮಿಕ ಸಭಾ ಕಾರ್ಯಕ್ರಮ

- Advertisement -
- Advertisement -
vtv vitla
vtv vitla

ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರುವಾಯಿ ಇದರ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಅಖಂಡ ಭಜನಾ ಕಾರ್ಯಕ್ರಮ ಜ.25ರ0ದು ನಡೆಯಿತು.


ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಕ್ಷೇತ್ರ ಒಡಿಯೂರು, ಹಾಗೂ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲ ಇವರು ಉಪಸ್ಥಿತರಿದ್ದು ಆಶೀರ್ವಚನಗೈದರು. ಹರೀಶ್ ಬಳಂತಿಮೊಗರು ಧಾರ್ಮಿಕ ಭಾಷಣ ಮಾಡಿದರು. ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಪೆರುವಾಯಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು


ಈ ಸಂದರ್ಭದಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಹಲವಾರು ವರ್ಷಗಳಿಂದ ಧಾರ್ಮಿಕ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಕೃಷ್ಣ ಶೆಟ್ಟಿ ಕೆಳಗಿನಮನೆ ಇವರನ್ನು ಸನ್ಮಾನಿಸಲಾಯಿತು.

ಜಯಶ್ರೀ ಮಡಿವಾಳ ಪೆರುವಾಯಿ ಇವರು ಪ್ರಾರ್ಥಿಸಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ರಾಜರಾಜೇಶ್ವರಿ ಮಾತೃ ಮಂಡಳಿ ಕಾರ್ಯದರ್ಶಿ ರೇವತಿ ನಾರಾಯಣ ನಾಯ್ಕ ಕಡೆಂಬಿಲ ಸನ್ಮಾನ ಪತ್ರ ವಾಚಿಸಿದ್ರು. ಬಜರಂಗದಳ ಪ್ರಮುಖರಾದ ಯತೀಶ್ ಪೆರುವಾಯಿ ವಂದಿಸಿದರು. ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಜತೆ ಕಾರ್ಯದರ್ಶಿ ನಾಗೇಶ್ ಮಾಸ್ತರ್ ಕೊಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ವೈದಿಕ ಕಾರ್ಯಕ್ರಮವನ್ನು ಶಂಬು ಭಟ್ ಹಾಗೂ ಬಳಗದಿಂದ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪ್ರಧಾನ ಕಾರ್ಯದರ್ಶಿಗಳಾದ ಜಯಂತ್ ಕುಲಾಲ್ ಮುಂಚಿರಬೆಟ್ಟು, ಪ್ರಮುಖರಾದ ಯೋಗೀಶ್ ಆಳ್ವ ಕಲಾಯ್ತಿಮಾರು , ಗಣೇಶ್ ಶೆಟ್ಟಿ ಪೇರಡ್ಕ, ಭಜನಾ ಮಂದಿರ ಅರ್ಚಕರಾದ ಶಂಕರ ನಾರಾಯಣ ಮೂರ್ತಿ ಭಟ್ ಸೇರಿದಂತೆ ಹಲವಾರು ಧಾರ್ಮಿಕ ಮುಖಂಡರುಗಳು ಮತ್ತು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!