- Advertisement -
- Advertisement -


ಪೆರ್ಲ: ಅಡಿಕೆ ಮರ ದಿಂದ ಬಿದ್ದು ಓರ್ವ ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ಪೆರ್ಲ ದಲ್ಲಿ ನಡೆದಿದೆ. ಅಡ್ಯನಡ್ಕ ಸಮೀಪದ ಕುದ್ದು ಪದವು ನಿವಾಸಿ ಕೂಲಿ ಕಾರ್ಮಿಕ ಚನಿಯಪ್ಪ ನಾಯ್ಕ (49) ಮೃತ ಪಟ್ಟ ವ್ಯಕ್ತಿ.
ಬಾಯಾರು ಬಳ್ಳೂರುನಲ್ಲಿರುವ ತನ್ನ ಪತ್ನಿ ಮನೆಯಲ್ಲಿ ಅಡಿಕೆ ಮರಕ್ಕೆ ಹತ್ತಿದ ಸಂದರ್ಭದಲ್ಲಿ ಬಿದ್ದಿದ್ದು, ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರ ತಂದೆ, ಪತ್ನಿ ಶಿಲ್ಪ, ಮಕ್ಕಳಾದ ಅಶ್ವಥ್, ಅಕ್ಷಯ, ಅಶ್ವಿನಿ, ಸಹೋದರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -