Monday, September 28, 2026
spot_imgspot_img
spot_imgspot_img

ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಸಭೆ

- Advertisement -
- Advertisement -
vtv vitla
vtv vitla

ಬಂಟ್ವಾಳ: ಇಲ್ಲಿನ ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ 2020 – 21ಸಾಲಿನ ವಾರ್ಷಿಕ ಮಹಾ ಸಭೆಯು ಬಿ. ಸಿ ರೋಡ್ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.

ಮಹಾಸಭೆಯನ್ನು ಉದ್ಘಾಟಿಸಿದ ಸೊಸೈಟಿ ಅಧ್ಯಕ್ಷ ಬಿ. ರಮಾನಾಥ ರೈ ಮಾತನಾಡಿ 2019 – 2021 ವರ್ಷದಲ್ಲಿ ಸೊಸೈಟಿಯು ಒಟ್ಟು 16,81,69,392 ರೂಪಾಯಿಗಳ ವ್ಯವಹಾರ ನಡೆಸಿ 2020 – 21 ನೇ ಸಾಲಿನಲ್ಲಿ 4,52,191 ರೂಪಾಯಿ ಲಾಭಾಂಶ ಹೊಂದಿ ಗ್ರಾಹಕರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದೆ, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಾಖೆಗಳನ್ನು ತೆರೆದು ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಶಕ್ತಿ ನೀಡಲು ನಮ್ಮ ಸೊಸೈಟಿಯು ಸಿದ್ಧವಿದೆ ಎಂದರು.

ಮುಖ್ಯ ಕಾರ್ಯ ನಿರ್ವಣಾಧಿಕಾರಿ ಬೇಬಿ ಕುಂದರ್ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕರಾದ ನಾರಾಯಣ ನಾಯ್ಕ ಲೆಕ್ಕಪತ್ರ ಮಂಡಿಸಿದರು. ಶಾಖಾಧಿಕಾರಿ ಕಾವ್ಯ ಶ್ರೀ ಮಹಾಸಭೆಯ ನೋಟಿಸ್ ಹಾಗೂ ಮುಂದಿನ ವರ್ಷದ ಆಯ ವ್ಯಯ ಮಂಡಿಸಿದರು.

vtv vitla
vtv vitla

ಉಪಾಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ನಿರ್ದೇಶಕರುಗಳಾದ ಚಂದ್ರ ಪ್ರಕಾಶ್ ಶೆಟ್ಟಿ, ಪದ್ಮಶೇಕರ ಜೈನ್, ಅಬ್ಬಾಸ್ ಆಲಿ, ಅಲ್ಫೊನ್ಸ್ ಮಿನೇಜೆಸ್, ಮಂಜುಳಾ ಕುಶಲ ಪೆರಾಜೆ , ಅಮ್ಮು ಅರ್ಬಿಗುಡ್ಡೆ ಉಪಸ್ಥಿತರಿದ್ದರು. ನಿರ್ದೇಶಕರಾದ ಎಮ್.ಎಸ್. ಮೊಹಮ್ಮದ್ ಸ್ವಾಗತಿಸಿ ಸುದರ್ಶನ್ ಜೈನ್ ವಂದಿಸಿದರು. ಸುಭಾಶ್ಚಂದ್ರ ಜೈನ್ ಕಾರ್ಯ ಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶೈಲೇಶ್ ಗೌಡ, ರಂಜಿತಾ ನಾಯ್ಕ ಉಪಸ್ಥಿತರಿದ್ದರು.

vtv vitla
vtv vitla
- Advertisement -

Related news

error: Content is protected !!