Friday, March 21, 2025
spot_imgspot_img
spot_imgspot_img

ಬಂಟ್ವಾಳ: ಮನೆಯ ಹೊರಗೆ ಇಟ್ಟಿದ್ದ ಅಡಿಕೆ ಕಳವು

- Advertisement -
- Advertisement -

ಬಂಟ್ವಾಳ: ಮನೆಯ ಹೊರಗೆ ಇಟ್ಟಿದ್ದ ಅಡಿಕೆ ಕಳವುಗೈದ ಘಟನೆ ಬಂಟ್ವಾಳದ ಸಂಗಬೆಟ್ಟು ಗ್ರಾಮದಲ್ಲಿ ನಡೆದಿದೆ.

ಮೊಹಮ್ಮದ್ ತೌಸಿಫ್ ರವರ ಮನೆಯ ಕಾರ್ ಪಾರ್ಕಿಂಗ್ ನಲ್ಲಿ ಸುಮಾರು 8 ಗೋಣಿ ಸುಲಿಯದ ಅಡಿಕೆಯನ್ನು ಇರಿಸಿ ಅಗತ್ಯ ಕೆಲಸ ನಿಮಿತ್ತ ಮಡಿಕೇರಿಗೆ ಹೋಗಿದ್ದರು. ನಿನ್ನೆ ವಾಪಸ್ಸು ಮನೆಗೆ ಬಂದು ಪರಿಶೀಲಿಸಿ ನೋಡಿದಾಗ ಅಡಿಕೆ ಕಳವು ಆದ ಘಟನೆ ಬೆಳಕಿಗೆ ಬಂದಿದೆ.

ಯಾರೋ ಅಪರಿಚಿತರು ಈ ಕೃತ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳವಾದ ಅಡಿಕೆಯ ಒಟ್ಟು ಮೌಲ್ಯ ಸುಮಾರು 1,00,000 ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

vtv vitla
- Advertisement -

Related news

error: Content is protected !!