

ಬಂಟ್ವಾಳ: ಮಾದಕ ವಸ್ತು ಸೇವನೆ ಮತ್ತು ಮಾರಾಟದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಟ್ವಾಳ ಬಾರೆಕಾಡು ನಿವಾಸಿ ಇರ್ಷಾದ್ (23), ಮಂಜೇಶ್ವರ ತಾಲೂಕು ಉದ್ಯಾವರ ಗುತ್ತು ಮನೆ ನಿವಾಸಿ ದೀಕ್ಷಿತ್ (19) ಬಂಧಿತರು.

ಡಿ.22 ರಂದು ಬಂಟ್ವಾಳ ಠಾಣಾ ಎಸ್.ಐ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ವಾಹನ ತಪಾಸಣೆ ಮಾಡುವಾಗ ಆಟೋ ರಿಕ್ಷಾದಲ್ಲಿ ಬಂದ ಇಬ್ಬರನ್ನು ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿದ್ದು, ದೃಢ ಪಟ್ಟಿದ್ದು, ಈ ವೇಳೆ ಅವರನ್ನು ಪರಿಶೀಲಿಸಿದಾಗ ಮಾರಾಟಕ್ಕೆ ಇಟ್ಟುಕೊಂಡಿದ್ದ ಮಾದಕ ವಸ್ತುಗಳು ದೊರೆತ್ತಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಎಂಡಿಎಂಎ ಸೊತ್ತಿಗೆ ರೂ. 20,000/- ಇದ್ದು, ರಿಕ್ಷಾಕ್ಕೆ ರೂ. 75,000/- ಮೌಲ್ಯ ಇರುತ್ತದೆ. ಮಾದಕ ನಿದ್ರಾಜನಕ ಸೊತ್ತಾದ ಎಂಡಿಎಂಎ ಅನ್ನು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಾರಾಟ ಮಾಡಲು ಇಟ್ಟುಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆ 118/2022 ಕಲಂ: 8 (C), 22(b), 27(a) NDPS Act 1985 003 0 ದಾಖಲಾಗಿದೆ.
