Thursday, February 2, 2023
spot_imgspot_img
spot_imgspot_img

ಬಂಟ್ವಾಳ: ರಾತ್ರೋರಾತ್ರಿ ಏಸುವಿನ ಪ್ರತಿಮೆ ನಿರ್ಮಾಣ; ಹಿಂ.ಜಾ.ವೇ ಎಚ್ಚರಿಕೆ ಬೆನ್ನಲ್ಲೇ ತೆರವು ಕಾರ್ಯ

- Advertisement -G L Acharya G L Acharya
- Advertisement -

ಬಂಟ್ವಾಳ: ಸರಪಾಡಿ ಸಮಿಪದ ಅಲ್ಲಿಪಾದೆ ಎಂಬಲ್ಲಿ ಸಂತ ಜೋನ್ ಚರ್ಚ್ ಪಕ್ಕದ ಸರಕಾರಿ ಜಾಗದಲ್ಲಿ ರಾತ್ರೋರಾತ್ರಿ ಏಸುವಿನ ಪ್ರತಿಮೆ ನಿರ್ಮಿಸಿ ಅದಕ್ಕೆ ಆವರಣ ಗೋಡೆ ನಿರ್ಮಿಸಿ ಸರಕಾರಿ ಜಾಗವನ್ನು ಕಬಳಿಸುವ ಹುನ್ನಾರದಲ್ಲಿದ್ದವರಿಗೆ ಹಿಂದು ಜಾಗರಣ ವೇದಿಕೆ ಸರಪಾಡಿ ವಲಯದಿಂದ ಎಚ್ಚರಿಕೆಯನ್ನು ನೀಡಲಾಗಿತ್ತು.

ನಾವೂರ, ಅಲ್ಲಿಪಾದೆ, ಪಂಚಾಯತ್, ತಾಲೂಕು ದಂಡಾಧಿಕಾರಿಗೆ ತೆರವಿಗೆ ಆಗ್ರಹ ಮಾಡಿತ್ತು. ಶುಕ್ರವಾರ ಬಂಟ್ವಾಳದಲ್ಲಿ ಪತ್ರಿಕಾಗೋಷ್ಠಿ ಕರೆದು ಒಂದು ವಾರದ ತೆರವಿಗೆ ಹಿಂ.ಜಾ.ವೇ. ಗಡುವು ನೀಡಿತ್ತು. ಇದರ ಬೆನ್ನಲೇ ರಸ್ತೆ ಬದಿಯಲ್ಲಿದ್ದ ಯೇಸುವಿನ ಪ್ರತಿಮೆ ನಾಲ್ಕು ಅಡಿ ಹಿಂದಕ್ಕೆ ಹೋಗಿದ್ದು, ತಾಲೂಕು ಆಡಳಿತದ ಯಂತ್ರ ಗರ್ಜನೆ ಮಾಡಿದ್ದು ಅವರಣ ಗೋಡೆ ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.

vtv vitla
- Advertisement -

Related news

error: Content is protected !!