Sunday, July 6, 2025
spot_imgspot_img
spot_imgspot_img

ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ನೂತನ ಆಡಳಿತಾಧಿಕಾರಿಯಾಗಿ ರವೀಂದ್ರ ದರ್ಭೆ ನೇಮಕ

- Advertisement -
- Advertisement -

ಮಾಣಿ : ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ 32 ವರ್ಷಗಳಿಂದ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳಿಗೆ ಗುರುತಿಸಲ್ಪಟ್ಟ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ನೂತನ ಆಡಳಿತಾಧಿಕಾರಿಯಾಗಿ ರವೀಂದ್ರ ದರ್ಭೆ ನೇಮಕರಾಗಿದ್ದಾರೆ.

ಉತ್ತಮ ಗಣಿತ ಶಿಕ್ಷಕರಾಗಿ ಗುತಿಸಲ್ಪಟ್ಟ ಇವರು ಕಳೆದ 26 ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿದ ಅನುಭವ ಹೊಂದಿರುತ್ತಾರೆ . ಉಪ್ಪಿನಂಗಡಿಯ ಪ್ರತಿಷ್ಟಿತ ಸಂಸ್ಥೆಯೆಂದೇ ಗುರುತಿಸಲ್ಪಟ್ಟ ಇಂದ್ತಪ್ರಸ ಆಂಗ್ಲಮಾಧ್ಯಮ ಶಾಲೆಯಲ್ಲಿ 13 ವರ್ಷಗಳ ಕಾಲ ಮುಖ್ಯಸ್ಥರಾಗಿ ದುಡಿದು ಸಂಸ್ಥೆಯ ಪ್ರಗತಿಗೆ ಕಾರಣರಾದವರು . ನೆಲ್ಯಾಡಿ , ರಾಮಕುಂಜ ಹಾಗೂ ಗೋಣಿಕೊಪ್ಪಲಿನ ಪ್ರಸಿದ್ದ ಕೂರ್ಗ ಪಬ್ಲಿಕ್ ಸ್ಕೂಲಿನಲ್ಲಿ ದುಡಿದ ಅನುಭವ ಇವರದು.

ಅಂತರಾಷ್ಟ್ರೀಯ ಸಂಸ್ಥೆಗಳಾದ ಉಪ್ಪಿನಂಗಡಿಯ ಜೇಸಿ ಸಂಸ್ಥೆ ಹಾಗೂ ರೋಟರಿ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಉಪ್ಪಿನಂಗಡಿಯ ಹಲವಾರು ಸಂಸ್ಥೆಗಳಲ್ಲಿಯೂ ಸೇವೆಗಳನ್ನು ನೀಡಿರುತ್ತಾರೆ.

- Advertisement -

Related news

error: Content is protected !!