Friday, June 5, 2026
spot_imgspot_img
spot_imgspot_img

ಮಂಗಳೂರು: ಅಪ್ರಾಪ್ತ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ; ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

- Advertisement -
- Advertisement -

ಮಂಗಳೂರು: ಅಪ್ರಾಪ್ತ ಯುವತಿಯರನ್ನು ಬಳಸಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಚೈಲ್ಡ್ ಲೈನ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಹಕಾರದೊಂದಿಗೆ ಮಂಗಳೂರು ಪೊಲೀಸರು ಬೇಧಿಸಿ 10ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅತ್ತಾವರ ನಂದಿಗುಡ್ಡೆಯ ವಸತಿ ಸಮುಚ್ಚಯವೊಂದರಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಘಟಕದ ಪೊಲೀಸರು ಉಪ್ಪಳದ ಅಬೂಬಕ್ಕರ್ ಸಿದ್ದಿಕ್, ನಂದಿಗುಡ್ಡೆಯ ಶಮೀನಾ ಮತ್ತು ಅಡ್ಯಾರ್‌ ಪದವಿನ ಐಸಮ್ಮನನ್ನು ಬಂಧಿಸಿದ್ದರು.

ಇದನ್ನೂ ಓದಿ: ಮಂಗಳೂರು: ಅಪಾರ್ಟ್ ಮೆಂಟ್ ಒಂದರ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ.!

ಬಳಿಕ ಇದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂಡುಬಿದಿರೆ ಹೊಸಬೆಟ್ಟಿನ ಸಂದೀಪ್, ಕೈಕಂಬದ ಸಿಪ್ರಿಯಾನ್ ಅಂದ್ರಾದೆ, ಉದ್ಯಾವರ ಮಂಜೇಶ್ವರದ ಶರೀಫ್ ಎಂಬವರನ್ನು ಬಂಧಿಸಲಾಗಿದ್ದು ಇವರು ಗಿರಾಕಿಗಳಾಗಿ ಆಗಮಿಸಿ ದೌರ್ಜನ್ಯವೆಸಗಿದ್ದರೆನ್ನಲಾಗಿದೆ. ಇವರೊಂದಿಗೆ ವೇಶ್ಯಾವಾಟಿಕೆ ಜಾಲದಲ್ಲಿ ಕೆಲಸ ಮಾಡಿಕೊಂಡಿದ್ದ ತಲಪಾಡಿಯ ರಹಮತ್, ಕಣ್ಣೂರಿನ ಸನಾ ಆಲಿಯಾಸ್ ಅಸ್ಮಾ, ಬಂಟ್ವಾಳ ನರಿಂಗಾನದ ಉಮ್ಮರ್ ಮತ್ತು ಬೆಂದೂರ್‌ವೆಲ್‌ನ ಹನೀಫ್‌ನನ್ನು ಬಂಧಿಸಲಾಗಿದೆ. ಇವರೆಲ್ಲರ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!