Tuesday, June 23, 2026
spot_imgspot_img
spot_imgspot_img

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಬೋಟ್‌ ಮುಳುಗಡೆ; 10ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟೊಂದು ಅವಘಡಕ್ಕೀಡಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಆಳ ಸಮುದ್ರಕ್ಕೆ ಹೋದ ಮೀನುಗಾರಿಕಾ ದೋಣಿ ತಳಭಾಗದಲ್ಲಿ ತೂತಾಗಿ ಮುಳುಗಡೆಯಾದ ಘಟನೆ ನಿನ್ನೆ ಸಂಜೆ ನಡೆದಿದೆ. ಅದರಲ್ಲಿದ್ದ ಎಲ್ಲಾ 10ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಜೈ ಶ್ರೀ ರಾಮ್ ಎಂಬ ಹೆಸರಿನ ಕೃಷ್ಣ ಕುಮಾರ್ ಮಾಲಕತ್ವದ ಮೀನುಗಾರಿಕಾ ದೋಣಿ ನಿನ್ನೆ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದು, ಆಳ ಸಮುದ್ರ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಏಕಾಏಕಿ ತೂತಾಗಿ ನೀರು ಒಳ ನುಗ್ಗಿತ್ತು . ಈ ಸಂದರ್ಭದಲ್ಲಿ ದೋಣಿಯಲ್ಲಿದ್ದವರೂ ಆಸು-ಪಾಸಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರಿಕಾ ದೋಣಿಯವರಿಗೆ ಮಾಹಿತಿ ನೀಡಿದ್ದು, ಆ ಬೋಟ್‌ನಲ್ಲಿದ್ ವರೂ ಅಪಘಾತಕ್ಕೆ ಸಿಲುಕಿದ್ದ ದೋಣಿಯಲ್ಲಿದ್ದವರನ್ನೂ ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ.

ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿದ್ದು, ಸಮುದ್ರ ಪ್ರಕ್ಷುಬ್ಧವಾಗಿದೆ.

- Advertisement -

Related news

error: Content is protected !!