- Advertisement -
- Advertisement -
ಮಂಗಳೂರು: ಆಧಾರ್ ಕಾರ್ಡ್ ಫೋರ್ಜರಿ ಮಾಡಿಸಿ ಮುಸ್ಲಿಂ ಹೆಸರನ್ನು ಹಿಂದೂ ಮಾಡಿ ಹಿಂದೂ ಹುಡುಗಿಯೊಂದಿಗೆ ಬೆಂಗಳೂರಿಗೆ ಮಜಾ ಮಾಡಲು ಹೊರಟ ಮುಸ್ಲಿಂ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಥಳಿಸಿದ ಘಟನೆ ಮಂಗಳೂರಿನ ಪಂಪ್ ವೆಲ್ ಬಳಿ ನಡೆದಿದೆ.

ಮುಸ್ಲಿಂ ಯುವಕನೋರ್ವ ತನ್ನ ಆಧಾರ್ ಕಾರ್ಡ್ ಫೋರ್ಜರಿ ಮಾಡಿಸಿ ಹಿಂದೂ ಹುಡುಗಿಯೊಂದಿಗೆ ಬಸ್ಸಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಮುಸ್ಲಿಂ ಯುವಕನನ್ನು ಬಸ್ಸಿನಿಂದ ಹೊರ ಎಳೆದು ಹಿಗ್ಗಾ ಮುಗ್ಗ ಥಳಿಸಿದ್ದಾರೆ.


ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿದ್ದಾರೆ.


- Advertisement -








