Thursday, February 2, 2023
spot_imgspot_img
spot_imgspot_img

ಮಂಗಳೂರು: ಮನೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ನಷ್ಟ

- Advertisement -G L Acharya G L Acharya
vtv vitla
- Advertisement -

ಮಂಗಳೂರು: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಮಂಗಳೂರು ಹೊರಲವಯದ ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಮಾರಡ್ಕ ಎಂಬಲ್ಲಿ ನಡೆದಿದೆ.

ಇಲ್ಲಿನ ಮಾರಡ್ಕ ನಿವಾಸಿ ಸುನಂದ ಪೂಜಾರ್ತಿ ಎಂಬವರ ಮನೆಗೆ ಬುಧವಾರದಂದು ಮಧ್ಯೆ ರಾತ್ರಿಯ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಹಂಚಿನ ಮನೆ ಬೆಂಕಿ ತಗುಲಿ ಉರಿಯಲು ಆರಂಭಿಸಿದೆ.

ಈ ಸಂದರ್ಭ ಮನೆಯಲ್ಲಿದ್ದ ಸುನಂದರವರ ಮಗ ಹೊರಗೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳೀಯರಾದ ರಾಜು, ವಿಕೇಶ್, ಚಂದ್ರಹಾಸ, ಸುರೇಶ್ ಮತ್ತಿತರರು ಸೇರಿ ಬೆಂಕಿಯನ್ನು ನಂದಿಸಲು ನೀರನ್ನು ಹಾಯಿಸಿದ್ದು, ಬಳಿಕ ಅಗ್ನಿಶಾಮಕದಳ ಬಂದು ಹೆಚ್ಚಿನ ಅನಾಹುತವಾಗದಂತೆ ಬೆಂಕಿಯನ್ನು ನಂದಿಸಿದ್ದಾರೆ.

ಘಟನೆ ನಡೆದ ದಿನ ಸುನಂದರವರು ಸಂಬಂಧಿಕರ ಮನೆಗೆ ಹೋಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪಂಚಾಯತ್ ಮಾಜಿ ಸದಸ್ಯ ಮೋರ್ಗನ್ ವಿಲಿಯಂ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Related news

error: Content is protected !!