Sunday, July 26, 2026
spot_imgspot_img
spot_imgspot_img

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ; ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಅಸುನೀಗಿದ ಮಗು!

- Advertisement -
- Advertisement -

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯ ಮಗು ಅದಲು ಬದಲು ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಸಂತ್ರಸ್ತ ಮಗು ಅಸುನೀಗಿದೆ.

ಘಟನೆಯ ವಿವರ:

ಅಕ್ಟೋಬರ್ ತಿಂಗಳಿನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಹಿಳೆಯೊಬ್ಬಳು ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭ ವೈದ್ಯರು ತಾಯಿಗೆ ಹೆಣ್ಣು ಮಗುವಾಗಿದೆ ಎಂದು ತಿಳಿಸಿದ್ದರು ಎಂದು ಹೇಳಲಾಗಿತ್ತು. ನಂತರ ಮಗುವಿಗೆ ಉಸಿರಾಟ ತೊಂದರೆ ಕಾರಣ ಐಸಿಯುನಲ್ಲಿಡಲಾಗಿತ್ತು. ಚಿಕಿತ್ಸೆ ಬಳಿಕ ಪೋಷಕರ ಕೈಗೆ ಮಗುವನ್ನು ನೀಡಲಾಗಿದೆ. ಈ ವೇಳೆ ಪರಿಶೀಲಿಸಿದಾಗ ಗಂಡು ಮಗುವನ್ನು ನೀಡಲಾಗಿತ್ತು.

ಮಗು ಬದಲಾದ ಬಗ್ಗೆ ವೈದ್ಯರ ಗಮನಕ್ಕೆ ತಂದಾಗ, ಗಂಡು ಮಗುವೇ ಜನಿಸಿದೆ. ದಾಖಲೆಯಲ್ಲಿ ಹೆಣ್ಣು ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ತಿಳಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಹೆಣ್ಣು ಮಗುವನ್ನೇ ನೀಡಲು ಆಗ್ರಹಿಸಿದ್ದರು. ಅಲ್ಲದೇ, ಈ ಬಗ್ಗೆ ಮಂಗಳೂರಿನ ಬಂದರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಗುವಿನ ಪೋಷಕರ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಗುವಿನ ಡಿಎನ್‌ಎ ಮಾದರಿಯನ್ನು ಪರೀಕ್ಷೆಗಾಗಿ ಹೈದರಾಬಾದ್​ಗೆ ಕಳುಹಿಸಿಕೊಡಲಾಗಿತ್ತು. ಆದರೆ, ಡಿಎನ್ಎ ಪರೀಕ್ಷೆಯ ವರದಿ ಬರುವ ಮುನ್ನವೇ ಮಗು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದೆ.

- Advertisement -

Related news

error: Content is protected !!