Wednesday, September 16, 2026
spot_imgspot_img
spot_imgspot_img

ಮಂಗಳೂರು: ಸ್ವಾಮೀಜಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಸುರತ್ಕಲ್: ನೊಂದ ಜೀವಗಳಿಗೆ ದಾರಿದೀಪವಾಗಬೇಕಾಗಿದ್ದ ಸ್ವಾಮೀಜಿಯೋರ್ವರ ಮೃತದೇಹ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ತಲಕಲ ನೂತನವಾಗಿ ನಿರ್ಮಿಸಲಾದ ಧರ್ಮಚಾವಡಿಯ ಧರ್ಮದರ್ಶಿ , ಶ್ರೀ ಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿ(50) ಎಂದು ಗುರುತಿಸಲಾಗಿದೆ.

ಇವರ ಪೂರ್ವಶ್ರಮದ ಹೆಸರು ದೇವಿಪ್ರಸಾದ ಶೆಟ್ಟಿ. ವಿವಾಹಿತರಾಗಿದ್ದ ಇವರು, ಪತ್ನಿ ಪುತ್ರಿಯನ್ನು ಹೊಂದಿದ್ದಾರೆ. 5 ವರ್ಷದ ಹಿಂದೆ ಸನ್ಯಾಸತ್ವ ದೀಕ್ಷೆ ಪಡೆದುಕೊಂಡಿದ್ದರು. ಕುಟುಂಬದಿಂದ ಹೊರ ಬಂದು ಧಾರ್ಮಿಕ ಕೆಲಸ ಕಾರ್ಯದಲ್ಲಿ ತೊಡಗಿದ್ದ ಇವರು ತಲಕಳದ ಮಠದಲ್ಲೇ ವಾಸಿಸುತ್ತಿದ್ದರು. ಶುಕ್ರವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ್ದ ಬಳಿಕ ತಮ್ಮ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಲಕಲ ಸ್ವಾಮಿ ಮಾನಸಿಕವಾಗಿ ನೊಂದಿದ್ದು, ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಸ್ವಾಮೀಜಿಯವರ ಪೂರ್ವಾಶ್ರಮದ ಪತ್ನಿ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

- Advertisement -

Related news

error: Content is protected !!