Monday, September 14, 2026
spot_imgspot_img
spot_imgspot_img

ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಬಂಗಾರ್ದ ಪರ್ಬ- ಅಂಗವಾಗಿ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಕಿರೀಟ ಸಮರ್ಪಣೆ-ಭವ್ಯ ವಾಹನ ಜಾಥಾ

- Advertisement -
- Advertisement -

ವಿಟ್ಲ: ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಬಂಗಾರ್ದ ಪರ್ಬ ಸೆ.14 ರಿಂದ16 ವರೆಗೆ ನಡೆಯಲಿದ್ದು ಇದರ ಅಂಗವಾಗಿ ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಕಿರೀಟವನ್ನು ಸೆ.13ರ ಆದಿತ್ಯವಾರ ಸಮರ್ಪಿಸಲಾಯಿತು.

ಇಂದು ಬೆಳಗ್ಗೆ ಅಕ್ಷಯ ಗೌಡ ಸಮುದಾಯ ಭವನ ಶಾಂತಿನಗರ, ವಿಟ್ಲದಿಂದ ವಾಹನ ಜಾಥಾ ಮೂಲಕ ಮೆರವಣಿಗೆ ಆರಂಭಗೊಂಡು ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ತನಕ ಸಾಗಿತು.

ಬೆಳಗ್ಗೆ 11.30ಕ್ಕೆ ಶ್ರೀ ಗಣಪತಿ ದೇವರ ಮೂರ್ತಿಯು ಬಂಟ್ವಾಳದಿಂದ ವಾಹನ ಜಾಥಾ ಮೂಲಕ ಸಾಗಿ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನವನ್ನು ತಲುಪಿತು. ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದರು.

- Advertisement -

Related news

error: Content is protected !!