- Advertisement -
- Advertisement -


ಮಂಗಳೂರು: ಬೈಕಂಪಾಡಿಯ ಮೀನಕಳಿಯಲ್ಲಿ ರೌಡಿಶೀಟರ್ ಟ್ಯಾಟೂ ರಾಜಾ ಅಲಿಯಾಸ್ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಯಾನೆ ಮೈಕಲ್ ನವೀನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈಗ ಬಂಧಿಸಿದ ಆರೋಪಿಗಳ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.
ಮೈಕಲ್ ನವೀನ್ ಎಂಬಾತನ ಮೇಲೆ ಈಗಾಗಲೇ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 8 ಕ್ರಿಮಿನಲ್ ಕೇಸುಗಳಿವೆ. ಟ್ಯಾಟೂ ರಾಜಾನ ಕೊಲೆಗೆ ಪ್ರಮುಖ ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.
ಇದಕ್ಕೂ ಮುಂಚೆ ಎರಡು ಆರೋಪಿಗಳನ ಮೂಲಕ ಮೂಲ್ಕಿ ಎಂಬಲ್ಲಿ ಇತರರನ್ನು ಬಂಧಿಸಲು ಹೋದಾಗ ಆರೋಪಿಗಳನ್ನು ಪೊಲೀಸರ ಮೇಲೆ ಹಲ್ಲೆಗೈದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದರು.
- ಪುತ್ತೂರು | ಫೌಂಡೇಶನ್ ಹೆಸರಿನಲ್ಲಿ ದೇಣಿಗೆ ಸಂಗ್ರಹಕ್ಕೆ ಯತ್ನ: ಯುವಕನ ವಿರುದ್ಧ ಪ್ರಕರಣ ದಾಖಲು
- ಔಷಧ, ವೈದ್ಯಕೀಯ ಉಪಕರಣಗಳ ಮೂಲ ದರ ಪ್ರಕಟಣೆ ಸುತ್ತೋಲೆ ಜಾರಿಗೆ ಒತ್ತಾಯಿಸುವುದಿಲ್ಲ; ಹೈಕೋರ್ಟ್ಗೆ ಸರ್ಕಾರದ ಭರವಸೆ
- ಮಂಗಳೂರು | ಇ-ಚಲನ್ ಹೆಸರಿನಲ್ಲಿ ಸೈಬರ್ ವಂಚನೆ: 8 ಪ್ರಕರಣ ದಾಖಲು, 44 ಲಕ್ಷ ರೂ. ನಷ್ಟ
- ಶ್ರೀ ಹಾಸನಾಂಬ ದೇವಿಯ ದರ್ಶನದ ಸಂಪೂರ್ಣ ವಿವರ
- ದ.ಕ. ಜಿಲ್ಲೆಯ ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ


- Advertisement -








