Sunday, August 2, 2026
spot_imgspot_img
spot_imgspot_img

ಮಡಿಕೇರಿ: ದಂಪತಿಗಳ ನಡುವೆ ನಡೆದ ಜಗಳ ಪತ್ನಿಯ ಸಾವಿನಲ್ಲಿ ಅಂತ್ಯ; ಅನಾಥರಾದ ಇಬ್ಬರು ಮಕ್ಕಳು

- Advertisement -
- Advertisement -

ಮಡಿಕೇರಿ: ದಂಪತಿಗಳ ನಡುವೆ ಘರ್ಷಣೆ ಉಂಟಾಗಿ ಪತ್ನಿಯನ್ನು ಪತಿ ಕೊಂದ ಪರಿಣಾಮ ಎರಡೂವರೆ ವರ್ಷದ ಬಾಲಕ ಹಾಗೂ ಆರು ತಿಂಗಳ ಹೆಣ್ಣು ಮಗು ಅನಾಥವಾಗಿರುವ ಘಟನೆ ದಕ್ಷಿಣ ಕೊಡಗಿನ ಕಾಕೋಟುಪರಂಬು ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.

ತೋಟದ ಮನೆಯಲ್ಲಿ ವಾಸವಿದ್ದ ಸುಮಿತ್ರಾ (25) ಎಂಬಾಕೆಯನ್ನು ಆಕೆಯ ಪತಿ ಚೋಮಚ್ಚಿರ ಲಾವ ಕೊಲೆ ಮಾಡಿದ್ದಾನೆ.

ಶುಕ್ರವಾರ ರಾತ್ರಿ ಲಾವಾ ಕಬ್ಬಿಣದ ರಾಡ್‌ನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಬೆಳಗ್ಗೆ ಇತರೆ ಕಾರ್ಮಿಕರು ಪರಿಶೀಲನೆ ನಡೆಸಿದಾಗ ಸುಮಿತ್ರಾ ಮೃತಪಟ್ಟಿರುವುದು ಕಂಡು ಬಂದಿದ್ದು, ವಿಚಾರಣೆ ನಡೆಸಿದಾಗ ಲಾವ ತಪ್ಪೊಪ್ಪಿಕೊಂಡಿದ್ದಾನೆ.

ತಂದೆಯ ಕೃತ್ಯದಿಂದ ಅನಾಥರಾಗಿರುವ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಪೊಲೀಸರು ಲಾವನನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಅಯ್ಯಪ್ಪ, ವಿರಾಜಪೇಟೆ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಸಿಐ ಶಿವ ರುದ್ರಪ್ಪ, ಗ್ರಾಮಾಂತರ ಠಾಣೆ ಪಿಎಸ್ಐ ಸಿದ್ದಲಿಂಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

vtv vitla
vtv vitla
- Advertisement -

Related news

error: Content is protected !!