Sunday, May 25, 2025
spot_imgspot_img
spot_imgspot_img

ಕೊಣಾಜೆ: ಅಡಿಕೆ ಕಳವು ಪ್ರಕರಣ; ಆರೋಪಿಗಳಿಬ್ಬರು ಅರೆಸ್ಟ್‌..!

- Advertisement -
- Advertisement -

ಕೊಣಾಜೆ: ಅಡಿಕೆ ಕಳ್ಳತನ ನಡೆಸುತ್ತಿದ್ದ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ ಘಟನೆ ಕುರ್ನಾಡು ಮಿತ್ತಕೋಡಿ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ರಿಯಾಝ್ ಹಾಗೂ ನಿಝಮುಲ್ ಹಕ್ ಎಂದು ಗುರುತಿಸಲಾಗಿದೆ.

ನಾಟೆಕಲ್ ಪರಿಸರದಲ್ಲಿ ಜು.18 ರಂದು ಅಡಿಕೆ ಕಳ್ಳತನವಾದ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಕುರ್ನಾಡು ಮಿತ್ತಕೋಡಿ ಎಂಬಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಇವರಲ್ಲಿದ್ದ ಎರಡು ಲಕ್ಷ ಐವತ್ತು ಸಾವಿರ ಮೌಲ್ಯದ ಎರಡು ಅಟೋ ರಿಕ್ಷಾ ಹಾಗೂ 325 ಕೆಜಿ ಸುಲಿದ ಅಡಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

- Advertisement -

Related news

error: Content is protected !!