ಮದುವೆ ಮಂಟಪದಲ್ಲಿ ಮದುಮಗಳು ಸೂರ್ಯವಂಶ ಚಲನಚಿತ್ರದ ಸೇವಂತಿಯೇ… ಸೇವಂತಿಯೇ… ಎಂಬ ಹಾಡನ್ನು ಹಾಡಿರುವ ವಿಡಿಯೋವೊಂದು ಫೇಸ್‌ಬುಕ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿಡಿಯೋ ಅಪ್‌ಲೋಡ್ ಆಗಿರುವ ಕೇವಲ ನಾಲ್ಕು ದಿನಕ್ಕೆ 1.3 ಮಿಲಿಯನ್ ವೀಕ್ಷಣೆಯನ್ನು ಪಡೆದು ನೆಟ್ಟಿಗರ ಮನ ಗೆದ್ದಿದೆ.
ಮಧು ಮಗಳು ಮದುವೆ ಮಂಟಪದಿಂದ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಅಳುತ್ತಾ ಮನೆಯವರನ್ನು ನೆನೆದು ಕಣ್ಣೀರು ಹಾಕುತ್ತಾ ಹೋಗುತ್ತಾಳೆ. ಆದರೆ ಇಲ್ಲೊಬ್ಬಳು ಮಧು ಮಗಳು ತನ್ನ ಮದುವೆಯ ದಿನ ವಿಷ್ಣುವರ್ಧನ್ ಸರ್ ಅಭಿನಯದ ಸೂರ್ಯವಂಶ ಚಲನಚಿತ್ರದ ಹಾಡು ‘ಯಾರು ಇರದ ಆ ಊರಲ್ಲಿ ನಾನೇ ನಿನ್ನವಳಾಗಿರುವೆ’….. ಹಾಡನ್ನು ಹಾಡುತ್ತಾ ಮನೆಯವರಿಗೆ ವಿದಾಯ ಹೇಳುವ ವಿಡಿಯೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. 5 ನಿಮಿಷವಿರುವ ಈ ವಿಡಿಯೋವನ್ನು ನೀವು ಸ್ಕಿಪ್ ಮಾಡದೆ ನೋಡುವುದಂತೂ ನಿಜ. ಯಾಕೆಂದರೆ ವಧು ತನ್ನೆಲ್ಲಾ ನೋವುನ್ನು ಮುಚ್ಚಿಟ್ಟು ಬಹಳ ಸೊಗಸಾಗಿ ಹಾಡನ್ನು ಹಾಡಿದ್ದಾಳೆ.
ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋ 1.3ವಿಲಿಯನ್ ವೀಕ್ಷಣೆಯನ್ನು ಪಡೆದು ನೆಟ್ಟಿಗರ ಮನಗೆದ್ದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ಸ್ ಮತ್ತು ಕಮೆಂಟ್‌ಗಳು ಕೂಡಾ ಹರಿದು ಬಂದಿದೆ. ವಧುವಿನ ಗಾಯನ ಕಲೆಯನ್ನು ಹೊಗಳುತ್ತಾ, ನಿನ್ನ ಮುಂದಿನ ಜೀವನ ಸುಖಮಯವಾಗಲಿ ಎಂದು ಹೆಚ್ಚಿನವರು ಕಮೆಂಟ್ ಮಾಡುವ ಮೂಲಕ ವಧುವಿಗೆ ಮದುವೆಯ ಶುಭ ಹಾರೈಕೆಯನ್ನು ತಿಳಿಸಿದ್ದಾರೆ.