Monday, May 6, 2024
spot_imgspot_img
spot_imgspot_img

ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿ ಅವರ ಜನ್ಮದಿನ- ಪ್ರಧಾನಿ ನರೇಂದ್ರ ಮೋದಿ ನಮನ

- Advertisement -G L Acharya panikkar
- Advertisement -

ನವದೆಹಲಿ: ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮದಿನ ಇಂದು.ಈ ಸಂಧರ್ಭದಲ್ಲಿ ದೇಶದ ನಾಯಕರು ಅವರನ್ನು ಸ್ಮರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜಯ ಘಾಟ್ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

ಅವರು ತಮ್ಮ ಸಂದೇಶದಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿ , ವಿನಯವಂತ ಮತ್ತು ದೃಢ ನಿಲುವಿನ ವ್ಯಕ್ತಿಯಾಗಿದ್ದರು. ಸರಳತೆಯ ಸಾಕಾರದ್ಂತಿದ್ದ ಲಾಲ್ ಬಹದ್ದೂರ್ ಶಾಸ್ತಿಯವರು ಈ ದೇಶದ ಕಲ್ಯಾಣಕ್ಕಾಗಿ ಬದುಕಿದರು. ಅವರು ಭಾರತಕ್ಕಾಗಿ ಮಾಡಿದ ಕೆಲಸಗಳನ್ನು ಅತ್ಯಂತ ಕೃತಜ್ಞತೆಯಿಂದ ಅವರ ಜಯಂತಿ ಸಂಧರ್ಭದಲ್ಲಿ ನೆನೆಯುತ್ತೇವೆ ಎಂದು ಹೇಳಿದರು. ಇನ್ನು ಲಾಲ್ ಬಹದ್ದೂರ್ ಶಾಸ್ತ್ರಿಗಳ ಪುತ್ರ ಸುನಿಲ್ ಶಾಸ್ತ್ರಿ ಮತ್ತು ಅನಿಲ್ ಶಾಸ್ತ್ರಿ ಇಂದು ಬೆಳಗ್ಗೆ ವಿಜಯ ಘಾಟ್ ಗೆ ತೆರಳಿ ಗೌರವ ನಮನ ಸಲ್ಲಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 151ನೇ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ನಮನ ಸಲ್ಲಿಸಿದರು. ದೆಹಲಿಯ ರಾಜ್ ಘಾಟ್ ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಪುಷ್ಪ ಗುಚ್ಚ ಇರಿಸಿ ಗೌರವ ಸಲ್ಲಿಸಿದರು.

- Advertisement -

Related news

error: Content is protected !!