- Advertisement -
- Advertisement -
ಸುಳ್ಯ: ತನ್ನ ಪತಿಯ ಸಹೋದರನ ಮಕ್ಕಳಿಗೆ ಮಾವಿನ ಹಣ್ಣು ಕೊಯ್ದು ಕೊಟ್ಟರೆಂದು ಕೋಪಗೊಂಡ ಸೊಸೆಯೊಬ್ಬರು ಬಿಸಿನೀರಿಗೆ ಮೆಣಸಿನ ಹುಡಿ ಬೆರೆಸಿ ಅತ್ತೆಯ ಮೇಲೆ ಅದನ್ನು ಎರಚಿದ ಅಮಾನವೀಯ ಘಟನೆ ಸುಳ್ಯದ ಪೈಚಾರ್ ಎಂಬಲ್ಲಿ ನಡೆದಿದೆ.

ಇಸ್ಮಾಯಿಲ್ ಮತ್ತು ಅಬ್ದುಲ್ಲ ಸಹೋದರರ ಮನೆ ಪೈಚಾರಿನಲ್ಲಿ ಅಕ್ಕ ಪಕ್ಕ ದಲ್ಲಿ ಇದ್ದು ತಾಯಿ ಅಬ್ದುಲ್ಲಾ ರ ಮನೆಯಲ್ಲಿ ವಾಸಿಸುತ್ತಿದ್ದರು.

ಅಬ್ದುಲ್ಲರ ಮಕ್ಕಳಿಗೆ ನೆಕ್ಕರೆ ಮಾವು ಕೊಯ್ದು ಕೊಟ್ಟುದಕ್ಕೆ ಕುಪಿತ ಗೊಂಡ ಇಸ್ಮಾಯಿಲ್ ರ ಪತ್ನಿ ಮೈಮೂನರವರು ಅತ್ತೆಯ ಮೇಲೆ ಮೆಣಸಿನ ಪುಡಿ ಮಿಶ್ರಿತ ನೀರನ್ನು ಎರಚಿದ್ದಾರೆ ಎನ್ನಲಾಗಿದೆ.

ಇಸ್ಮಾಯಿಲ್ ಮತ್ತು ಅಬ್ದುಲ್ಲರ ಜಾಗ ವಿವಾದದಲ್ಲಿ ಗಲಾಟೆ ಯಾಗಿ ಊರಿನವರು ಈ ಹಿಂದೆ ಮಾತುಕತೆ ನಡೆಸಿದ್ದರೆನ್ನಲಾಗಿದೆ.

ಇದೀಗ ಅತ್ತೆಗೆ ಮೆಣಸಿನ ನೀರು ಎರಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿ ಮೈಮೂನರ ಈ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.


- Advertisement -








