Saturday, September 19, 2026
spot_imgspot_img
spot_imgspot_img

ಮುರುಡೇಶ್ವರ: ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿ ಯುವಕ ದಾರುಣ ಸಾವು

- Advertisement -
- Advertisement -

ಭಟ್ಕಳ: ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿ ಯುವಕ ಸಾವನ್ನಪ್ಪಿದ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಕಂಚುಕೋಟೆಯ ನಿವಾಸಿ ಮಹೇಶ (33) ಮೃತ ದುರ್ದೈವಿ.

ಮಹೇಶ ಹಾಗೂ ಸ್ನೇಹಿತರು ಸೇರಿಕೊಂಡು ಕಾರಿನಲ್ಲಿ ಬಂದಿದ್ದು ಸಿಗಂದೂರು, ಜೋಗ ಫಾಲ್ಸ್ ಎಲ್ಲಾ ಪ್ರವಾಸ ಮುಗಿಸಿ ಮುರ್ಡೇಶ್ವರಕ್ಕೆ ಬಂದಿದ್ದರು. ಭಾನುವಾರ ಮುರ್ಡೇಶ್ವರ ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವಾಗ ದೊಡ್ಡ ಅಲೆಯೊಂದು ಬಂದು ಮಹೇಶ ಅವರನ್ನು ಕೊಚ್ಚಿಕೊಂಡು ಹೋಗಿದೆ.

ಸ್ವಲ್ಪ ಹೊತ್ತಿನಲ್ಲಿಯೇ ಮೀನುಗಾರರು ಅವರನ್ನು ರಕ್ಷಣೆ ಮಾಡಿದರಾದರೂ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತ ಪಟ್ಟಿದ್ದಾರೆ. ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!