Saturday, August 29, 2026
spot_imgspot_img
spot_imgspot_img

ಮೊತ್ತ ಮೊದಲ ಬಾರಿಗೆ ರಾಜ್ಯಕ್ಕೆ ‘ಏರಿಯಲ್ ಲ್ಯಾಡರ್’

- Advertisement -
- Advertisement -

ಬೆಂಗಳೂರು: ಗಗನಚುಂಬಿ ಕಟ್ಟಡಗಳಲ್ಲಿ ಸಂಭವಿಸುವ ಆಗ್ನಿ ಅವಘಡಗಳನ್ನ ನಂದಿಸುವ ವಾಹನ ‘ಏರಿಯಲ್ ಲ್ಯಾಡರ್’ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿದೆ.

‘ಏರಿಯಲ್ ಲ್ಯಾಡರ್’ ಸಹಾಯದಿಂದ 90 ಮೀಟರ್ ಎತ್ತರದವರೆಗೂ ತಲುಪಿ ಬೆಂಕಿ ನಂದಿಸಬಹುದಾಗಿದೆ.

ಇದನ್ನು ನಾಳೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. 30 ಕೋಟಿ ವೆಚ್ಚದ ಈ ಲ್ಯಾಡರ್ ಅನ್ನು ಸರ್ಕಾರ ಫಿನ್ಲೆಂಡ್‌ ದೇಶದಿಂದ ತರಿಸಿದ್ದು, ಇದನ್ನು ಬಳಸಲಿರುವ 2ನೇ ನಗರ ಬೆಂಗಳೂರು ಆಗಲಿದೆ. ಇದಕ್ಕಿಂತಲೂ ಮೊದಲು ಮುಂಬೈನಲ್ಲಿ ಬಳಸಲಾಗಿತ್ತು.

ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸುವ ಆಗ್ನಿ ಅವಘಡಗಳನ್ನ ನಿಯಂತ್ರಿಸಲು ಅತ್ಯಾಧುನಿಕ ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ ಇದಾಗಿದ್ದು ರಾಜ್ಯ ರಾಜಧಾನಿಯಲ್ಲಿ ಬಳಕೆಗೆ ಬರಲಿದೆ.

- Advertisement -

Related news

error: Content is protected !!