
ಯುವಕೇಸರಿ ಅಬೀರಿ- ಅತಿಕಾರಬೈಲು ( ರಿ ) ಚಂದಳಿಕೆ ಸಂಘಟನೆಯ ಕಾರ್ಯಾಲಯದ ನವೀಕೃತ ಕಟ್ಟಡದಲ್ಲಿ ಇಂದು ಪೂರ್ವಾಹ್ನ 9 ಗಂಟೆಗೆ ಗಣಪತಿ ಹವನಗೊಂಡು 10 ಗಂಟೆಗೆ ವನಮಹೋತ್ಸವ ಮತ್ತು ಸಸಿ ವಿತರಣೆ ಹಾಗು ದತ್ತಿನಿಧಿ ವಿತರಣೆಯನ್ನು ಮಾಡಲಾಯಿತು .


ಮುಖ್ಯ ಅತಿಥಿಯಾಗಿ ವಿಟ್ಲ ಪೊಲೀಸ್ ಠಾಣೆಯ ಪ್ರೊಬೆಷನರಿ ಉಪನಿರೀಕ್ಷರಾದ ಧನಂಜಯ ಪಿ.ಸ್ , ಠಾಣೆಯ ಸಿಂಬಂಧಿಯಾದ ಮಧು ಕುಮಾರ್ , ಉದ್ಯಮಿಗಳಾದ ದೇಜಪ್ಪ ಪೂಜಾರಿ ನಿಡ್ಯ, ಯುವಕೇಸರಿ ಸಂಘದ ಗೌರವ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ , ಅಧ್ಯಕ್ಷರಾದ ಚಿದಾನಂದ , ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೇಪುಲಗುಡ್ಡೆ ಭಾಗವಹಿಸಿದ್ದರು.


ಜೂನ್ ತಿಂಗಳ ದತ್ತಿನಿಧಿಯನ್ನು ವಿಠಲಾ ಶೆಟ್ಟಿ ಚಂದಳಿಕೆ ಇವರಿಗೆ 10000 ರೂ. ನ ಚೆಕ್ಕು ಮತ್ತು 50 ಕೆ.ಜಿ ಅಕ್ಕಿಯನ್ನು ನೀಡಲಾಯಿತು. ಅಲ್ಲದೆ ಸುಮಾರು 200 ವಿವಿಧ ರೀತಿಯ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಯುವಕೇಸರಿಯ ಸರ್ವ ಸದಸ್ಯರು ಉಪಸ್ಥಿರಿದ್ದರು.


ಸುಶಾಂತ್ ಸಾಲಿಯಾನ್ ಚಂದಳಿಕೆ ಸ್ವಾಗತಿಸಿ , ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಪ್ರಸ್ತಾವಿಸಿ , ದಿವಾಕರ ಶೆಟ್ಟಿ ಅಬೀರಿ ವಂದಿಸಿ , ವಿಠಲ ಪೂಜಾರಿ ಅತಿಕಾರಬೈಲು ನಿರೂಪಿಸಿದರು.










