- Advertisement -



- Advertisement -
ಕಾಲೇಜಿನಲ್ಲಿ ಸ್ನೇಹಿತರೊಂದಿಗೆ ಇನ್‌ಸ್ಟಾ ರೀಲ್ಸ್ ಮಾಡಲು ಹೋದ ವಿದ್ಯಾರ್ಥಿ ಕಾಲೇಜಿನ ಟೆರೇಸ್ ಮೇಲಿಂದ ಆಯತಪ್ಪಿ ಬಿದ್ದು, ಸಾವನ್ನಪ್ಪಿದ ಘಟನೆ ಛತ್ತೀಸಗಢದ ಬಿಲಾಸಪುರ ಪಟ್ಟಣದಲ್ಲಿ ನಡೆದಿದೆ.
ಬಿಲಾಸಪುರ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಥಮ ಬಿಎಸ್‌ಸಿ ವಿದ್ಯಾರ್ಥಿ ಅಶುತೋಷ್ (20) ಮೃತಪಟ್ಟ ವಿದ್ಯಾರ್ಥಿ.
ರೀಲ್ಸ್ ಮಾಡಲೆಂದು ಐದು ಜನ ಸ್ನೇಹಿತರೊಂದಿಗೆ ಕಾಲೇಜಿನ ಟೆರೇಸ್‌ಗೆ ತೆರಳಿದ್ದಾನೆ. ಟೆರೇಸ್‌ನ ಗೋಡೆ ಮೇಲೆ ನಿಂತು ಕಿಟಕಿಯ ಸ್ಲ್ಯಾಬ್ ಮೇಲೆ ಹಾರಿದ್ದಾನೆ. ಈ ವೇಳೆ 20 ಅಡಿ ಎತ್ತರದ ಕಟ್ಟಡದಿಂದ ಆಯತಪ್ಪಿ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ವಿದ್ಯಾರ್ಥಿ ಪ್ರಾಣ ಕಳೆದುಕೊಂಡ ಎಂದು ಮೂಲಗಳು ತಿಳಿಸಿದೆ.
- Advertisement -