- Advertisement -


- Advertisement -
ಮೈಸೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ನಂಜನಗೂಡು ಹುಲ್ಲಹಳ್ಳಿ ಬಳಿ ನಡೆದಿದೆ. ಮಮತಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಮಮತಾ ಪೋಷಕರು ಮಗಳ ಸಾವಿಗೆ ಗಂಡನ ಮನೆಯಲ್ಲಿ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ.

ಮಮತಾಳ ಮದುವೆ ಪ್ರೇಮಚಂದ್ರ ನಾಯಕ ಜತೆ 2021, ಮೇ ನಲ್ಲಿ ನೆರವೇರಿತ್ತು. ಮದುವೆ ವೇಳೆ 30 ಗ್ರಾಂ ಚಿನ್ನ 80 ಸಾವಿರ ನಗದು ವರದಕ್ಷಿಣೆಯಾಗಿ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.

ನಂತರ ಪತಿ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ.ಮಮತಾ ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿದ್ದರು ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

- Advertisement -