Wednesday, June 24, 2026
spot_imgspot_img
spot_imgspot_img

ವರ್ಕ್ ಫ್ರಂ ಹೋಮ್ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚನೆ!

- Advertisement -
- Advertisement -
driving

ಬೆಂಗಳೂರು: ವರ್ಕ್ ಫ್ರಂ ಹೋಮ್ ಕೆಲಸ ಕೊಡಿಸುವುದಾಗಿ ನಂಬಿಸಿ ದಾಖಲೆಯನ್ನು ಪಡೆದು ವಂಚಿಸುತಿದ್ದ ವಂಚಕರನ್ನು ಬೆಂಗಳೂರಿನ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ತಮಿಳುನಾಡು ಮೂಲದ ಸಂಜೀವ್, ಸೆನ್ನಪ್ಪನ್ ಎನ್ನಲಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಉದ್ಯೋಗ ಖಾಲಿಯಿದೆ. ಮನೆಯಲ್ಲೇ ಕೂತು ಹಣ ಸಂಪಾದಿಸಬಹುದೆಂದು ಜಾಹೀರಾತು ನೀಡುತ್ತಿದ್ದ ಆರೋಪಿಗಳು, ನಿರುದ್ಯೋಗಿಗಳಿಂದ ಆಧಾರ್, ಪಾನ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು. ನಂತರ ದಾಖಲೆಯನ್ನು ದುರುಪಯೋಗಪಡಿಸಿಕೊಂಡು ಅವರದ್ದೇ ಹೆಸರಿನಲ್ಲಿ ಕಂಪನಿ ತೆರೆಯುತ್ತಿದ್ದರು.

ಅಲ್ಲದೆ ಗ್ರಾಹಕರು ಹಣ ನೀಡುವಂತೆ ಹೇಳಿದಾಗ ಕಂಪನಿಯನ್ನು ಬಂದ್ ಮಾಡುತ್ತಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು. ಇನ್ನು ಬಂಧಿತ ಆರೋಪಿಗಳಿಂದ ಒಟ್ಟು 3.5 ಕೋಟಿ ರೂ.ಗಳನ್ನು ವಶ ಪಡಿಸಿಕೊಂಡಿದ್ದು, ಘಟನೆ ಸಂಬಂಧ ಉತ್ತರ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!