ಪಕ್ಕದ ಮನೆಯ ಸ್ತ್ರೀಯರೊಂದಿಗೆ ಮಂಚ ಹತ್ತುತ್ತಿದ್ದ..! ಆಟ- ಪಾಠದ ನೆಪದಲ್ಲಿ ಮಕ್ಕಳನ್ನು ಮನೆಗೆ ಕರೆಸಿಕೊಂಡು ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತ ಆನಂದ ಪಡೆಯುತ್ತಿದ್ದ…! ಶಾಲೆಯಲ್ಲಿಯೇ ಬೇರೆ ಮಕ್ಕಳಿಂದ ಚಡ್ಡಿ ತೆಗೆಸಿ ಕೋಲಿನಿಂದ ಗುಪ್ತಾಂಗಕ್ಕೆ ತಿವಿದು ವಿಕೃತಿ ಮೆರೆಯುತ್ತಿದ್ದ. ಆದರೆ ಈತನ ದುಷ್ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ…? ಮುಂದೆ ಓದಿ:
ಸಮಾಜವನ್ನು ತಿದ್ದಿ ತೀಡಬೇಕಾದ ಶಿಕ್ಷಕನೇ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದಿದ್ದಾನೆ. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ವಿಕೃತ ಕಾಮುಕ ಶಿಕ್ಷಕನೊಬ್ಬನ ಕರ್ಮಕಾಂಡ ಬಯಲಾಗಿದೆ. ಮಗುವಿನ ಗುಪ್ತಾಂಗದೊಂದಿಗೆ ಶಿಕ್ಷಕ ಚೆಲ್ಲಾಟವಾಡಿದ್ದಾನೆ. ರಾಯಚೂರು ಜಿಲ್ಲೆಯ ಸಿಂಗಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ಅಜರುದ್ಧೀನ್ ಇಂತಹ ಕೃತ್ಯವೆಸಗಿದ್ದಾನೆ.
ಶಾಲೆಯಲ್ಲಿ ಮಗುವಿನ ತಲೆಯ ಮೇಲೆ ಗ್ಲಾಸ್ ಇಟ್ಟು, ಎರಡು ಕೈಗಳನ್ನು ಮೇಲೆ ಎತ್ತುವಂತೆ ತಿಳಿಸಿದ್ದಾನೆ. ಈ ವೇಳೆ ಬೇರೆ ಮಕ್ಕಳಿಂದ ಚಡ್ಡಿ ತೆಗೆಸಿ ಕೋಲಿನಿಂದ ಗುಪ್ತಾಂಗಕ್ಕೆ ತಿವಿದು ವಿಕೃತಿ ಮೆರೆದಿದ್ದಾನೆ. ಈ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ. ಅಲ್ಲದೆ, ಇಬ್ಬರು ಮಹಿಳೆಯರನ್ನ ಪರಿಚಯಿಸಿಕೊಂಡು ಸಲುಗೆ ಬೆಳೆಸಿಕೊಂಡಿದ್ದ ಈತ, ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯರನ್ನ ಲೈಂಗಿಕವಾಗಿ ಬಳಿಸಿಕೊಂಡಿದ್ದನ್ನ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದ. ಇತ್ತೀಚೆಗೆ ಕಳೆದು ಹೋಗಿದ್ದ ಮೊಬೈಲ್ ಯಾರಿಗೋ ದೊರೆತು ಅದರಲ್ಲಿದ್ದ ಮೆಮೊರಿ ಕಾರ್ಡ್ ತೆಗೆದಾಗ ಶಿಕ್ಷಕನ ಕರ್ಮಕಾಂಡ ಬಯಲಾಗಿದೆ ಎಂದು ಹೇಳಲಾಗಿದೆ.
ಅಶ್ಲೀಲ ವಿಡಿಯೋ ತೋರಿಸಿ ಆ ಮಹಿಳೆಯರಿಗೆ ಬೆದರಿಕೆ ಹಾಕಿರುವ ಈತ, ಅದೇ ಮಹಿಳೆಯರ ಮೂಲಕ ಮತ್ತಷ್ಟು ಮಹಿಳೆಯರನ್ನ ತನ್ನ ಕಾಮದಾಹಕ್ಕೆ ಬಳಸಿಕೊಂಡಿದ್ದಾನೆ. ಸುಮಾರು 40 ಮಹಿಳೆಯರನ್ನ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ವಿಷಯ ಬಹಿರಂಗವಾಗುತ್ತಿದ್ದಂತೆ ಶಿಕ್ಷಕ ಕೆಲಸದಿಂದ ಅಮಾನತು ಮಾಡಲಾಗಿದೆ. ಈತನ ಕಾಮದಾಟದ ವಿಚಾರ ಬಯಲಾಗುತ್ತಿದ್ದಂತೆ ಸಿಟ್ಟಿಗೆದ್ದ ಸಾರ್ವಜನಿಕರು ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಂಧನ ಭೀತಿಯಲ್ಲಿ ಈತ ತಲೆಮರೆಸಿಕೊಂಡಿದ್ದಾನೆ. ಆರೋಪಿ ಅಜುರುದ್ಧಿನ್ನನ್ನು ಕೆಲಸದಿಂದ ಬಿಇಒ ಶರಣಪ್ಪ ವಟಗಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.