Sunday, May 5, 2024
spot_imgspot_img
spot_imgspot_img

ವಿಟ್ಲ: ಶೋಕಮಾತಾ ಇಗರ್ಜಿ ವಿಟ್ಲ ಹಾಗೂ ಕಥೊಲಿಕ್ ಸಭಾ ವಿಟ್ಲ ಘಟಕದ ರಜತ ಮಹೋತ್ಸವದಲ್ಲಿ ‘ಹಿರಿಯರ ದಿನ ಆಚರಣೆ’ ಹಾಗೂ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ವಿಟ್ಲ: ಶತಮಾನೋತ್ಸವ ಸಂಭ್ರಮದಲ್ಲಿರುವ ಶೋಕಮಾತಾ ಇಗರ್ಜಿ ವಿಟ್ಲ ಹಾಗೂ ಕಥೊಲಿಕ್ ಸಭಾ ವಿಟ್ಲ ಘಟಕದ ರಜತ ಮಹೋತ್ಸವ ಸಂದರ್ಭದಲ್ಲಿ ಸೈಂಟ್ ವಿನ್ಸೆಂಟ್ ಪಾವ್ಲ್ ಸಭಾ ವಿಟ್ಲ ಇವರ ಸಹಕಾರದೊಂದಿಗೆ ಮಾ.19ರಂದು ಚರ್ಚಿನ ಸಭಾಭವನದಲ್ಲಿ ‘ಹಿರಿಯರ ದಿನ ಆಚರಣೆ’ ಹಾಗೂ ‘ಪ್ರತಿಭಾ ಪುರಸ್ಕಾರ ಕಾರ್ಯಕ್ರಮ’ ನಡೆಸಲಾಯಿತು.

ವಿಟ್ಲ ಚರ್ಚಿಗೆ ಸಂಬಂಧಪಟ್ಟ 70 ವರ್ಷ ಮೇಲಿನ ಹಿರಿಯರು ಬಲಿಪೂಜೆಯಲ್ಲಿ ಪಾಲ್ಗೊಂಡು, ಎಲ್ಲಾ ಹಿರಿಯರಿಗಾಗಿ ಪ್ರಾರ್ಥಿಸಲಾಯಿತು. ಪಾ| ಪೀಟರ್ ಗೊನ್ಸಾಲ್ವಿಸ್ ಹಾಗೂ ಪಾ| ಐವನ್ ಮೈಕೆಲ್ ರೊಡ್ರೀಗಸ್ ರವರು ಪ್ರಧಾನ ಗುರುಗಳಾಗಿ ಬಲಿ ಪೂಜೆಯನ್ನು ಅರ್ಪಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉದ್ಘಾಟಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷ ವಿಟ್ಲ ಚರ್ಚಿನ ಧರ್ಮಗುರುಗಳಾದ ಪಾ| ಐವನ್ ಮೈಕಲ್ ರೊಡ್ರೀಗಸ್ ರವರು ಹಿರಿಯರ ಜೀವಿಸಿದ ರೀತಿ ಹಾಗೂ ಯುವಜನರಿಗೆ ನೀಡಿದ ಮಾರ್ಗದರ್ಶನದಿಂದ ಯುವಜನರ ಮುಖಾಂತರ ಸಮಾಜದಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತವೆ. ಖಂಡಿತವಾಗಿಯು ಹಿರಿಯರ ಮಾರ್ಗದರ್ಶನ ಹಾಗೂ ಆಶೀರ್ವಾದ ಅಗತ್ಯ ಎಂದು ತಿಳಿಸಿದರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವಂದನೀಯ ಫಾ. ಪೀಟರ್ ಗೊನ್ಸಾಲ್ವಿಸ್, ಪ್ರಾಂಶುಪಾಲರು, ಸಂತ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೋಂದೆಲ್ ಮಂಗಳೂರು, ಎಲ್ಲಾ ಹಿರಿಯರಿಗೆ ಶುಭ ಹಾರೈಸಿದರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಕಥೊಲಿಕ್ ಸಭಾ ವಿಟ್ಲ ಘಟಕದ ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ರವರು ಘಟಕದ ರಜತ ಮಹೊತ್ಸವ ಆಚರಣೆಯ ಸಂದರ್ಭದಲ್ಲಿ ಕಳೆದ 25 ವರ್ಷಗಳಲ್ಲಿ ಸಂಘಟನೆಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳ ವರದಿಯನ್ನು ಚುಟುಕಾಗಿ ಮಂಡಿಸಿ ಕಾರ್ಯಕ್ರಮಗಳಿಗೆ ನೆರವಾದವರನ್ನು ಸ್ಮರಿಸಿದರು.

ಕೆಲ ಆಟದ ಮುಖಾಂತರ ಹಿರಿಯರಿಗೆ ಮನೋರಂಜನೆ ನೀಡಿ, ಗೆದ್ದವರಿಗೆ ಬಹುಮಾನ ನೀಡಲಾಯಿತು. ಹಿರಿಯರಲ್ಲಿ ಹಿರಿಯರಾದ ಇಬ್ಬರನ್ನು ಹಾಗೂ ಹೆಚ್ಚು ವರ್ಷ ಕೂಡಿ ಬಾಳಿದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು ನೂರಕ್ಕೂ ಅಧಿಕ ಹಿರಿಯರಿಗೆ ಕಾಣಿಕೆಯಾಗಿ ಬೆಡ್ಶಿಟ್ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಜಯ್ ಪಾಯ್ಸ್, ಕಾರ್ಯದರ್ಶಿ ತೊಮಸ್ ಮಸ್ಕರೇನಸ್, ಸಮಿತಿ ಸಂಯೋಜಕ ಲೂವಿಸ್ ಮಸ್ಕರೇನಸ್ ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಅಧ್ಯಕ್ಷ ಮೆಲ್ವಿನ್ ರೊಡ್ರೀಗಸ್’ರವರು ಸ್ವಾಗತಿಸಿದರು. ಮನೋಹರ್ ಲ್ಯಾನ್ಸಿಯವರು ಧನ್ಯವಾದಗೈದರು. ಜೇಸನ್ ಪಿಂಟೊ ಹಾಗೂ ರೆನಿಶಾ ರೊಡ್ರಿಗಸ್ ರವರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!