ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯುಂಟು ಮಾಡಬಲ್ಲದು. ಹಾಗಾಗಿ ಮಿತಿಯಲ್ಲಿ ಬಳಸುವುದು ಸೂಕ್ತ.
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇದೆ. ವಿಟಮಿನ್ ಸಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾಗಿ ಹಿಂದೆ ಮುಂದೆ ಯೋಚಿಸರೆ ಹೆಚ್ಚಿನವರು ನಿಂಬೆಹಣ್ಣಿನ ಜ್ಯೂಸ್‌ನ್ನುಹೆಚ್ಚಾಗಿ ಸೇವಿಸುತ್ತಾರೆ. ನಿಂಬೆಹಣ್ಣಿನಲ್ಲಿರುವ ಉರಿಯೂತದ ಗುಣಲಕ್ಷಣಗಳು, ಸಂಧಿವಾತವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕೆಲವರು ನಂಬುತ್ತಾರೆ, ಆದರೆ ನಿಂಬೆ ರಸವು ಮೂಳೆಗಳಿಗೆ ಹಾನಿ ಮಾಡುತ್ತದೆ ಎಂದು ಹೇಳಲಾಗುತ್ತದೆ. ನಿಂಬೆಜ್ಯೂಸ್‌ನ್ನು ಅತಿಯಾಗಿ ಸೇವಿಸುವುದರಿಂದ ನಿಂಬೆಹಣ್ಣು ನಮ್ಮ ಚರ್ಮ, ಕೂದಲು ಆರೋಗ್ಯಕ್ಕೆ ಒಳ್ಳೆಯದೇ ಆದರೆ ಅತಿಯಾಗಿ ಸೇವಿಸದರೆ ಮತ್ತು ಅದನ್ನು ಬಳಸ ಬೇಕಾದ ರೀತಿಯಲ್ಲಿ ಬಳಸದಿದ್ದರೆ ಆರೋಗ್ಯಕ್ಕೆ ತೊಂದರೆಗಳಾಗಬಹುದು.
ಕೂದಲು ಬೆಳ್ಳಗಾಗುತ್ತದೆ.
ನಿಂಬೆಹಣ್ಣನ್ನು ಕೂದಲಿಗೆ ನೇರವಾಗಿ ಬಳಸಿದರೆ ಕೂದಲು ಬೆಳ್ಳಗಾಗುತ್ತದೆ ಜೊತೆಗೆ ಕೂದಲು ಡ್ರೈ ಆಗುತ್ತದೆ. ನಿಂಬೆಹಣ್ಣಿನಲ್ಲಿರುವ ಆಮ್ಲೀಯ ಅಂಶವು ನಿಮ್ಮ ಕೂದಲನ್ನು ತುಂಬಾ ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ. ಅನೇಕ ಜನರು ತಲೆಹೊಟ್ಟು ತೊಡೆದುಹಾಕಲು ಈ ಪರಿಹಾರವನ್ನು ಬಳಸುತ್ತಾರೆ. ಆದರೆ ಅದನ್ನು ನೇರವಾಗಿ ಬಳಸುವುದಿಲ್ಲ, ಎಣ್ಣೆಯಲ್ಲೋ ಅಥವಾ ಮೆಹಂದಿಯಲ್ಲೋ ಜೊತೆ ಮಿಕ್ಸ್ ಮಾಡಿ.
ಹೊಟ್ಟೆ ನೋವಿಗೆ ಕಾರಣವಾಗಬಹುದು
ಕೆಲವರು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನಿಂಬೆ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುತ್ತಾರೆ. ಇದರಿಂದ ತೂಕ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅಧಿಕ ಸೇವನೆಯು ಹೊಟ್ಟೆ ನೊವಿಗೂ ಕಾರಣವಾಗಬಹುದು.
ಹಲ್ಲು ನೋವು
ನಿಂಬೆ ರಸದಲ್ಲಿರುವ ಆಸಿಡಿಕ್ ಆಮ್ಲವು ಇದನ್ನು ಹೆಚ್ಚಾಗಿ ಸೇವಿಸುವಾಗ ಹಲ್ಲಿಗೆ ಜುಮ್ಮೆನ್ನಿಸಬಹುದು. ಇದು ನಂತರ ಹಲ್ಲಿನ ಕೊಳೆಯುವಿಕೆಗೆ ಕಾರಣವಾಗಬಹುದು. ಹಲ್ಲಿನ ಸವೆತವು ಮೂಲತಃ ಖನಿಜಯುಕ್ತ ಹಲ್ಲಿನ ಪದಾರ್ಥಗಳ ರಾಸಾಯನಿಕ ನಷ್ಟವಾಗಿದೆ. ಆದ್ದರಿಂದ, ಹಲ್ಲಿನ ಸೂಕ್ಷ್ಮ ಸಂವೇದನೆಗಳಿದ್ದಾಗ ನೀವು ನಿಂಬೆಯಂತಹ ಸಿಟ್ರಿಕ್ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು.
ಒಣ ಚರ್ಮ
ನಿಂಬೆರಸವು ನಿಮ್ಮ ಚರ್ಮವನ್ನು ಇನ್ನಷ್ಟು ಒಣಗಿಸುತ್ತದೆ. ಹಾಗಾಗಿ ಎಣ್ಣೆಯುಕ್ತ ಚರ್ಮದವನ್ನು ನಿಂಬೆರಸವನ್ನು ಬಳಸಬಹುದು. ಒಂದು ವೇಳೆ ನೀವು ಒಣ ಚರ್ಮವನ್ನು ಹೊಂದಿದ್ದು ಪ್ರತಿದಿನ ನಿಂಬೆ ಜ್ಯೂಸ್ ಕುಡಿಯುತ್ತಿದ್ದರೆ ನಿಮ್ಮ ಚರ್ಮವನ್ನು ಇನ್ನಷ್ಟು ಒಣಗಿಸಬಹುದು. ಒಣಚರ್ಮದವರು ನಿಂಬೆರಸವನ್ನು ಬಳಸುವುದಾದರೆ ಇತರ ಸಾಮಾಗ್ರಿಯೊಂದಿಗೆ ಬೆರೆಸಿ ಬಳಸುವುದು ಉತ್ತಮ.
ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ
ನೀವು ನಿಂಬೆ ರಸವನ್ನು ಸೇವಿಸಿದಾಗ, ಅದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಆದರೆ, ಹೆಚ್ಚು ನಿಂಬೆಹಣ್ಣಿನ ಸೇವನೆಯು ನಿಮ್ಮ ಮೂತ್ರಕೋಶವನ್ನು ಹಿಗ್ಗಿಸುತ್ತದೆ ಎಂಬುವುದು ನಿಮಗೆ ಗೊತ್ತಿದೆಯೇ?, ನೀವು ಆಗಾಗ್ಗೆ ನಿಂಬೆಯನ್ನು ಸೇವಿಸುವಾಗ ಸಾಕಷ್ಟು ನೀರನ್ನು ಕುಡಿಯಬೇಕು. ಇದರಿಂದ ನಿಮ್ಮ ಚರ್ಮ ನಿರ್ಜಲೀಕರಣದಿಂದ ಮುಕ್ತವಾಗುತ್ತದೆ.