- Advertisement -
- Advertisement -
ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಡಿ.16 ರಿಂದ 20.ರವರೆಗೆ ಕಾಲಾವಧಿ ಕಜಂಬು ಜಾತ್ರೆಯು ನಡೆಯಲಿದೆ. ಡಿ 16 ಶುಕ್ರವಾರದಂದು ಧ್ವಜಾರೋಹಣಗೊಂಡು, ಡಿ17ರಂದು ಕಜಂಬು ಉತ್ಸವ ನಡೆಯಲಿದೆ.
ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಕಜಂಬು ಜಾತ್ರೆಯ ಪ್ರಯುಕ್ತ ಅನ್ನಸಂತರ್ಪಣೆಯು ನಡೆಯಲಿದ್ದು, ದಿನಾಂಕ; 24-12-2022ರಂದು ಭಂಡಾರದ ಕೋಟ್ಯದಲ್ಲಿ ಮಲರಾಯಿ ದೈವ ಮತ್ತು ಪಿಲಿಚಾಮುಂಡಿ ದೈವಕ್ಕೆ ನೇಮ ಜರಗಲಿದೆ.
ಈ ದೇವತಾ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -