




ವಿಟ್ಲ: ಶ್ರೀರಾಮ್ ಫ್ರೆಂಡ್ಸ್, ವಿಟ್ಲ ಇದರ ಆಶ್ರಯದಲ್ಲಿ ದಿ| ರಜನೀಶ್ ಇವರ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ “ರಜನೀಶ್ ಟ್ರೋಫಿ 2022” ವು ಡಿ. 17 ಮತ್ತು ಡಿ. 18 ರಂದು ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಡಿ. 17 ರಂದು ಬೆಳಿಗ್ಗೆ ಗಂಟೆ 8 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷ್ಣಯ್ಯ ಅರಮನೆ ನೆರವೇರಿಸಲಿದ್ದಾರೆ. ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಟ್ಲ ಶ್ರೀರಾಮ್ ಫ್ರೆಂಡ್ಸ್‌ನ ಗೌರವಾಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅರುಣ್ ವಿಟ್ಲ, ಅಶೋಕ್ ಶೆಟ್ಟಿ, ರವೀಶ್ ವಿಟ್ಲ, ಹರೀಶ್ ಸಿ.ಎಚ್, ಮಾಜಿ ಅಧ್ಯಕ್ಷ ರಮಾನಾಥ್ ವಿಟ್ಲ, ಬಂಟರ ಸಂಘ ವಿಟ್ಲ ವಲಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿ, ವಿಟ್ಲ ಪ.ಪಂ. ಮಾಜಿ ಅಧ್ಯಕ್ಷೆ ಚಂದ್ರಕಾತಿ ಶೆಟ್ಟಿ, ಶೆಲ್ಟರ್ ಅಸೋಸಿಯೇಟ್ಸ್, ಕನ್ಸಟಿಂಗ್ ಸಿವಿಲ್ ಇಂಜಿನಿಯರಿಂಗ್ & ಕಂಟ್ರಾಕ್ಟರ್ ಸಂತೋಷ್ ಶೆಟ್ಟಿ ಪೆಲತ್ತಡ್ಕ, ವಿಟ್ಲ ಪ.ಪಂ. ಸದಸ್ಯ ವಿ.ಕೆ ಅಶ್ರಫ್, ವಿಟ್ಲ ವಿ.ಟಿ.ವಿ ನಿರ್ದೇಶಕರು ರಾಮ್‌ದಾಸ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಂಜಣ್ತಿಮಾರ್, ವಿಟ್ಲ ಶ್ರೀರಾಮ್ ಫ್ರೆಂಡ್ಸ್ ಅಧ್ಯಕ್ಷ ರವಿಕುಮಾರ್ ಕಟ್ಟೆ ಭಾಗವಹಿಸಲಿದ್ದಾರೆ.
ಡಿ.18 ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷ ದಿವ್ಯಪ್ರಭಾ ಗೌಡ, ಚಿಲ್ತಡ್ಕ, ಅಶೋಕ್ ಕುಮಾರ್ ರೈ, ರೈ ಎಸ್ಟೇಟ್ ಕೋಡಿಂಬಾಡಿ, ಮೈಸೂರು ಎಸ್.ಎಲ್.ವಿ ಗ್ರೂಪ್‌ನ ಮಾಲಕ ದಿವಾಕರ ದಾಸ್ ನೇರ್ಲಾಜೆ, ಬೆಂಗಳೂರು ಶ್ರೀ ಉಡುಪಿ ಡಿಲಕ್ಸ್ ಹೋಟೆಲ್‌ನ ಮಾಲಕ ಉದಯರಾಜ್ ಪೆರ್ಮುದೆ, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್ ಸಮೇತಡ್ಕ ಪುತ್ತೂರು, ದ.ಕ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷ ಸಹಜ್ ಜೆ.ರೈ ಬಳಜ್ಜ, ರೋಷನ್ ರೆಬೆಲ್ಲೋ ಸಿಝ್ಲರ್ ಸಮೇತ್ತಡ್ಕ ಪುತ್ತೂರು, ಉದ್ಯಮಿ ಶ್ರೀಧರ್ ಶೆಟ್ಟಿ ಗುಬ್ಯ ಮೆಗಿನಗುತ್ತು, ದಿನೇಶ್ ಸಿ.ಎಚ್, ದ.ಕ.ಜಿಲ್ಲೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಫೈಝಲ್, ಪುತ್ತೂರು ಪದ್ಮಶ್ರೀ ಅಸೋಸಿಯೇಟ್ಸ್‌ನ ತೆರಿಗೆ ಸಲಹೆಗಾರ ಕೃಷ್ಣ ಎಂ. ಅಳಿಕೆ, ಬಂಟ್ವಾಳ ತಾಲೂಕು ಯುವ ಬಂಟರ ಸಂಘ ಅಧ್ಯಕ್ಷ ನಿಶಾನ್ ಆಳ್ವ, ಸಂತೋಷ್ ಶೆಟ್ಟಿ ಸಿನಾಜೆ ಸಿವಿಲ್ ಇಂಜಿನಿಯರ್, ನಿಟಿಲ ಕನ್ಸ್‌ಸ್ಟ್ರಕ್ಷನ್ ಕೆಲಿಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಹುಮಾನಗಳ ವಿವರ :
ಪ್ರಥಮ ಬಹುಮಾನ – ಶಾಶ್ವತ ಫಲಕ ಹಾಗೂ ನಗದು ರೂ. 55,555/-
ದ್ವಿತೀಯ ಬಹುಮಾನ – ಶಾಶ್ವತ ಫಲಕ ಹಾಗೂ ನಗದು ರೂ. 35,555/-
ತೃತೀಯ & ಚತುರ್ಥ ಶಾಶ್ವತ ಫಲಕ
ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದ ನೇರಪ್ರಸಾರ ವಿಟಿವಿ ಯಲ್ಲಿ ಪ್ರಸಾರವಾಗಲಿದೆ.