


ಶ್ರೀ ವಿಟ್ಲ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಶ್ರೀ ಅರಸು ಮುಂಡಾಲತ್ತಾಯರ ದೈವದ ಭಂಡಾರವು ಜ. 14 ರ ಶುಕ್ರವಾರ ಮಕರ ಸಂಕ್ರಮಣದ0ದು ಸಂಜೆ 5 ಗಂಟೆಗೆ ದೇವಸ್ಯದಿಂದ ಶ್ರೀ ಪಂಚಲಿ0ಗೇಶ್ವರ ಕ್ಷೇತ್ರಕ್ಕೆ ಆಗಮನವಾಗಲಿದೆ. ವಿಟ್ಲ ಸೀಮೆಯ ಮಹಾತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ನಿಮಿತ್ತ ಭಂಡಾರ ಬರಲಿದೆ.

ಶ್ರೀ ಅರಸು ಮುಂಡಾಲತ್ತಾಯರ ಸನ್ನಿಧಿ ದೇವಸ್ಯದಲ್ಲಿ ಜ. 14 ರಂದು ಬೆಳಗ್ಗೆ ಗಣಹೋಮ, ಸಂಜೆ 4:00 ಗಂಟೆಗೆ ತಂಬಿಲ ಸೇವೆ ತದನಂತರ, ದೈವದ ಭಂಡಾರವು ದೇವಸ್ಯ, ಮುಖ್ಯರಸ್ತೆ, ನಾಲ್ಕು ಮಾರ್ಗ, ನಂತರ ಆನೆ ಬಾಗಿಲಿನ ಮೂಲಕ ದೇವಾಲಯ ಪ್ರವೇಶಿಸಲಿದೆ.

ವಿಟ್ಲ ಸೀಮೆಯವರು ಮತ್ತು ದೇವಸ್ಯ ಬಯಲಿನವರು ಹಾಗೂ ಸಮಿತಿ ಸದಸ್ಯರು, ಎಲ್ಲಾ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಎಂದು ವಿನಂತಿಸಿಕೊಳ್ಳಲಾಗಿದೆ.
ದಿನಾಂಕ 25-01-2022 ಮಂಗಳವಾರ ಮಧ್ಯಾಹ್ನ ಶ್ರೀ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಎದುರು ಶ್ರೀ ಅರಸು ಮುಂಡಾಲತ್ತಾಯರ ನೇಮೋತ್ಸವ ನಡೆಯಲಿದೆ.
