- Advertisement -
- Advertisement -


ವಿಟ್ಲ ಮೂಡ್ನೂರು ಗ್ರಾಮದ ಹೊಸಮನೆ ಪಿಲಿಂಜ ಶ್ರೀ ಮಲರಾಯಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 50,000 ಅನುದಾನ ಬಂದಿರುತ್ತದೆ.

ಇದನ್ನು ಶ್ರೀ. ಕ್ಷೇ. ಧ. ಗ್ರಾ ಯೋಜನೆಯ ವಿಟ್ಲ ವಲಯದ ಮೇಲ್ವಿಚಾರಕರಾದ ವಿನೋಧ ಹಾಗೂ ವಿಟ್ಲ ಮುಡ್ನೂರು ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಹಾಗೂ ಸೇವಾ ಪ್ರತಿನಿಧಿ ಯಶೋಧ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಶ್ರೀ ಮಲರಾಯ ದೈವ ಚಾವಡಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸೇಸಪ್ಪ ಗೌಡ ಹಡಿಲು ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಚೆಕ್ಕನ್ನು ಹಸ್ತಾಂತರಿಸಲಾಯಿತು.

ಇದೇ ಬರುವ ದಿ: 07-05-2022 ರಿಂದ 10-05-2022ರ ವರೆಗೆ “ಶ್ರೀ ಮಲರಾಯ ದೈವ, ಧೂಮಾವತಿ, ದುಗ್ಗಲಾಯಿ ಮತ್ತು ಪರಿವಾರ ದೈವಗಳ” ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.


- Advertisement -