Friday, August 19, 2022
spot_imgspot_img
spot_imgspot_img

ವಿಟ್ಲ: ಫ್ರೆಂಡ್ಸ್ ಬಳಂತಿಮೊಗರು ಇದರ ಆಶ್ರಯದಲ್ಲಿ “ಕೆಸರ್ ಡ್ ಒಂಜಿ ದಿನ” ಕಾರ್ಯಕ್ರಮ

- Advertisement -G L Acharya G L Acharya
- Advertisement -

ವಿಟ್ಲ: ಫ್ರೆಂಡ್ಸ್ ಬಳಂತಿಮೊಗರು ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ” ಕೆಸರ್ ಡ್ ಒಂಜಿ ದಿನ” ಕಾರ್ಯಕ್ರಮವು ಬಳಂತಿಮೊಗರು ದೈವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ದಿ: 03-07-2022ನೇ ಆದಿತ್ಯವಾರ ನಡೆಯಲಿದೆ.

ಉದ್ಘಾಟನೆಯನ್ನು ಡಾ. ಎಂ.ಕೆ ಪ್ರಸಾದ್ ಖ್ಯಾತ ವೈದ್ಯರು ಪುತ್ತೂರು ನೇರವೆರಿಸಲಿದ್ದಾರೆ. ಸಭೆಯ ಅಧ್ಯಕ್ಷರಾಗಿ ಗಂಗಮ್ಮ ಎಚ್. ಶಾಸ್ತ್ರಿ ಸಂಚಾಲಕರು ವಿವೇಕಾನಂದ ಬಿಎಡ್ ಕಾಲೇಜು ಪುತ್ತೂರು, ಮುಖ್ಯ ಅತಿಥಿಗಳಾಗಿ ಪ್ರತಿಭಾ ಜಗನ್ನಾಥ ಗೌಡ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಪುಣಚ, ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಪ್ರವೀಣ್ ಕುಮಾರ್ ನಿರ್ದೇಶಕರು ಶ್ರೀ ಕ್ಷೇ. ಧ, ಗ್ರಾ ಯೋಜನೆ (ರಿ.), ಹರಿಕೃಷ್ಣ ಶೆಟ್ಟಿ ಮೂಡಂಬೈಲು ಮಾಜಿ ಸದಸ್ಯರು ತಾಲೂಕು ಪಂಚಾಯತ್, ಹರೀಶ್ ಸಿ. ಹೆಚ್ ಸದಸ್ಯರು ಪಟ್ಟಣ ಪಂಚಾಯಾತ್ ವಿಟ್ಲ, ಸುಂದರ್ ರೈ ಮಂದಾರ ತುಳು ಚಲನಚಿತ್ರ ನಟ, ಮೋನಪ್ಪ ಸುವರ್ಣ ಮುಖ್ಯಸ್ಥರು ಶ್ರೀ ಮಲರಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಆಗಮನಿಸಲಿದ್ದಾರೆ. ಲೀಲಾ ಬಳಂತಿಮೊಗರು ಅವರಿಗೆ ಸನ್ಮಾನ ನಡೆಯಲಿದೆ.

ಸಮಾರೋಪ ಸಮಾರಂಭ ಸಮಯ: ಸಂಜೆ ಗಂಟೆ 6-00ಕ್ಕೆ ನೇರವೇರಲಿದ್ದು, ಸಭೆಯ ಅಧ್ಯಕ್ಷರಾಗಿ ಎಸ್. ಆರ್. ರಂಗಮೂರ್ತಿ ಅಧ್ಯಕ್ಷರು, ಆಡಳಿತ ಸಮಿತಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಪುಣಚ, ಮುಖ್ಯ ಅತಿಥಿಗಳಾಗಿ ಸಂಜೀವ ಮಠಂದೂರು ಮಾನ್ಯ ಶಾಸಕರು, ರಾಮಕೃಷ್ಣ ಪೂಜಾರಿ ಬಳಂತಿಮೊಗರು ಅಧ್ಯಕ್ಷರು ಪುಣಚ ಗ್ರಾಮ ಪಂಚಾಯತ್‌, ಸಹಜ್ ರೈ ಬಳಜ್ಜ ಉಪಾಧ್ಯಕ್ಷರು ಬಿಜೆ.ಪಿ. ಯುವಮೋರ್ಚಾ ದ.ಕ, ಅಜಿತ್ ಹೊಸಮನೆ ವಿಭಾಗ ಸಹಸಂಯೋಜಕರು ಹಿಂದೂ ಜಾಗರಣ ವೇದಿಕೆ ಮಂಗಳೂರು, ಅಶೋಕ್‌ ಕುಮಾರ್ ಮೂಡಂಬೈಲು ಸದಸ್ಯರು ಗ್ರಾಮ ಪಂಚಾಯತ್ ಪುಣಚ, ಆನಂದ ನಾಯ್ಕ ತೊಂಡನಡ್ಕ ಸದಸ್ಯರು ಗ್ರಾಮ ಪಂಚಾಯತ್ ಪುಣಚ, ರಾಜೇಶ ನಾಯ್ಕ ತೊಂಡನಡ್ಕ ಸದಸ್ಯರು ಗ್ರಾಮ ಪಂಚಾಯತ್ ಪುಣಚ, ಶಾರದಾ ಉದಯ್ ಕುಮಾರ್ ಸರವು ಸದಸ್ಯರು ಗ್ರಾಮ ಪಂಚಾಯತ್ ಪುಣಚ ,ವಾಣಿಶ್ರೀ ಪಂಡಿತಮೂಲೆ ಸದಸ್ಯರು ಗ್ರಾಮ ಪಂಚಾಯತ್ ಪುಣಚ ಭಾಗವಹಿಸಲಿದ್ದಾರೆ.

ವಿವಿಧ ಆಟೋಟ ಸ್ಪರ್ಧೆಗಳು

ನಿಧಿ ಶೋಧನೆ – ಎಲ್ಲರಿಗೂ, ಪುರುಷರಿಗೆ: ವಾಲಿಬಾಲ್, ಕಬಡ್ಡಿ, ಹಗ್ಗ ಜಗ್ಗಾಟ, ಗೂಟ ಓಟ, ಉಪ್ಪು ಮೂಟೆ ಓಟ, ಹಾಳೆಯಲ್ಲಿ ಎಳೆಯುವುದು. ಮಹಿಳೆಯರಿಗೆ: ತ್ರೋಬಾಲ್, ಹಗ್ಗ-ಜಗ್ಗಾಟ, ಗೂಟ ಓಟ, ಸಂಗೀತ ಕುರ್ಚಿ, ತೆಂಗಿನ ಕಾಯಿ ಎಸೆಯುವುದು. ಮಕ್ಕಳಿಗೆ: ಓಟ, ಹಿಮ್ಮುಖ ಓಟ, ಹಾಳೆ ಎಳೆಯುವುದು. ಹಿರಿಯರಿಗೆ ಓಟ, ಹಗ್ಗಜಗ್ಗಾಟ ನಡೆಯಲಿದೆ.

- Advertisement -

Related news

error: Content is protected !!