Sunday, August 9, 2026
spot_imgspot_img
spot_imgspot_img

ವಿಟ್ಲ: ಬಿಲ್ಲವ ಸಂಘದ ಬೆಳ್ಳಿಹಬ್ಬ ಸಂಭ್ರಮೋತ್ಸವದ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ

- Advertisement -
- Advertisement -

ಬಿಲ್ಲವ ಸಂಘ ವಿಟ್ಲ ಬೆಳ್ಳಿಹಬ್ಬ ಸಂಭ್ರಮೋತ್ಸವದ 25 ಕಾರ್ಯಕ್ರಮಗಳಲ್ಲಿ ಒಂಬತ್ತನೇ ಕಾರ್ಯಕ್ರಮ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ವಿಟ್ಲ ಬ್ರಹ್ಮಶ್ರೀ ಸಭಾಭವನದಲ್ಲಿ ನಡೆಯಿತು.

ಬೆಳ್ಳಿ ಹಬ್ಬ ಸಂಭ್ರಮೋತ್ಸವ ಸಮಿತಿಯ ಅಧ್ಯಕ್ಷ ಡಾ ಗೀತಾಪ್ರಕಾಶ್ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರು ಹರೀಶ್ ಸಿ ಎಚ್, ಗೌರವಾಧ್ಯಕ್ಷ ದಾಸಪ್ಪ ಪೂಜಾರಿ ನೆಖಿಲಾರು ,ಉಪಾಧ್ಯಕ್ಷ ನೇಮಿರಾಜ್ ಅಳಿಕೆ, ಮಹಿಳಾ ಘಟಕದ ಗೌರವಾಧ್ಯಕ್ಷರು ಸುಜಾತಾ ಸಂಜೀವ ಪೂಜಾರಿ ಎನ್, ಬ್ರಹ್ಮಶ್ರೀ ನಾರಾಯಣ ಗುರು ಸಹಕಾರಿ ಸಂಘ ಅಧ್ಯಕ್ಷ, ಬ್ರಹ್ಮಶ್ರೀ ವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಯನ್, ಯುವ ವಾಹಿನಿ ಅಧ್ಯಕ್ಷ ಯಶವಂತ್ ಪೂಜಾರಿ ಎನ್, ಚಂದ್ರಹಾಸ ಸುವರ್ಣ, ಲಕ್ಷ್ಮಣ ಪೂಜಾರಿ, ಹರೀಶ್ ವಿಟ್ಲ, ದಾಮೋದರ ಪೂಜಾರಿ, ಉಪಸ್ಥಿತರಿದ್ದರು.

ಸಂಭ್ರಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ವಿಟ್ಲ ಸ್ವಾಗತಿಸಿದರು. ಜಗದೀಶ್ ಪಾಣೆಮಜಲು ಧನ್ಯವಾದ, ಧನಲಕ್ಷ್ಮಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. 80 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪೋಷಕರು ಸಹಕರಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

- Advertisement -

Related news

error: Content is protected !!