- Advertisement -
- Advertisement -
ವಿಟ್ಲ : ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯವರು ಶ್ರೀ ದೇವಿ ಮಹಾತ್ಮೆ ಎಂಬ ಕಥಾಭಾಗವನ್ನು ಬಯಲಾಟವಾಗಿ ಮಾ.3 ರಂದು ಸಂಜೆ ಗಂಟೆ 5.00 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಗುಂಪಲಡ್ಕ ಆಲಂಗಾರಿನಲ್ಲಿ ನಡೆಯಲಿದೆ.
ರಮೇಶ್ ವರಪ್ಪಾದೆ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರಿಂದ ಹರಕೆಯ ಸೇವೆಯಾಟವಾಗಿ ನಡೆಯಲಿದ್ದು, ಸಂಜೆ 5 ಗಂಟೆಗೆ ಚೌಕಿ ಪೂಜೆ, 5.30ಕ್ಕೆ ಯಕ್ಷಗಾನ ಆರಂಭ, ರಾತ್ರಿ 8ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ಪುಣ್ಯಕಾರ್ಯಕ್ಕೆ ಕಲಾಭಿಮಾನಿಗಳೆಲ್ಲ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿದಿದ್ದಾರೆ.
- Advertisement -