

ವಿಟ್ಲ: ಜೆಸಿಐ ವಿಟ್ಲ ವಲಯ 15ರ ವಲಯ ಅಧ್ಯಕ್ಷರ ಭೇಟಿಯ ನಿಮಿತ್ತ, ಇಂದು ವಿದ್ಯಾ ಸಂಸ್ಥೆಗೆ ವಲಯಾಧ್ಯಕ್ಷೆ JC. ಸೌಜನ್ಯ ಹೆಗ್ಡೆಯವರ ಭೇಟಿಯು, ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷರ ಮಾರ್ಗದರ್ಶನದಲ್ಲಿ ನಡೆಯಿತು.

ಜೇಸಿಸ್ ವಿದ್ಯಾಸಂಸ್ಥೆಯ ವರದಿಯನ್ನು ಆಲಿಸಿದ ವಲಯಾಧ್ಯಕ್ಷರು ಸಂಸ್ಥೆಯ ಶೈಕ್ಷಣಿಕ ಚಟುವಟಿಕೆ ಮತ್ತು ಸೌಲಭ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜೇಸಿ ವಾಣಿಯ ಬಗ್ಗೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾಹಿತಿ ಬರುವಂತೆ ಉಲ್ಲೇಖವಿರಲಿ ಮತ್ತು ಸದಾ 100 ಶೇಕಡ ಫಲಿತಾಂಶ ಮುಂದೆಯೂ ಬರುವಂತಾಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಪ್ರಸ್ತುತ ಜೇಸಿಸ್ ಸಂಸ್ಥೆಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, VZP ಶ್ರೀಮತಿ ಹೇಮಲತಾ ಪ್ರದೀಪ್, ಆಫೀಸಿಯಲ್ ಸೆಕ್ರೆಟರಿ ಗಂಗೊಳ್ಳಿ,ಜೇಸಿಸ್ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ, ಆಡಳಿತಾಧಿಕಾರಿ ರಾಧಾಕೃಷ್ಣ. ಎ ಉಪಸ್ಥಿತರಿದ್ದರು.ಜೇಸಿಸ್ ಸಂಸ್ಥೆಯ ಸುಮಾರು 30ಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಠ್ಠಲ್ ಜೇಸಿಸ್ ಆಂಗ್ಲಮಾಧ್ಯಮ ಶಾಲೆಯ ನಿರ್ದೇಶಕ ಪ್ರಭಾಕರ ಶೆಟ್ಟಿ, ಪ್ರಕಾಶ್, ಮೋಹನ. ಎ, ವಿಜಯ ಪೈಸ್ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ರಾಧಾಕೃಷ್ಣ. ಎ ಸ್ವಾಗತಿಸಿ, ಶಾಲಾ ವರದಿಯನ್ನು ವಾಚಿಸಿದರು. ಉಪ ಪ್ರಾಂಶುಪಾಲೆ ಹೇಮಲತಾ ಅವರು ವಂದನಾರ್ಪಣೆಗೈದರು. ಶಿಕ್ಷಕರುಗಳಾದ ಕವಿತಾ, ಭಾನುಪ್ರಕಾಶ್, ದೀಪ, ದೇವಿಕ ಪ್ರವೀಣ್ ಉಪಸ್ಥಿತರಿದ್ದರು.










