Monday, July 4, 2022
spot_imgspot_img
spot_imgspot_img

ವಿಟ್ಲ: SSLC ಪರೀಕ್ಷೆಯಲ್ಲಿ 622 ಅಂಕ ಪಡೆದ ಸಂತ ರೀಟಾ ಹೈಸ್ಕೂಲ್ ನ ವಿದ್ಯಾರ್ಥಿನಿಯರು

- Advertisement -
- Advertisement -

ವಿಟ್ಲ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ರಲ್ಲಿ 622 ಅಂಕವನ್ನು ವಿಟ್ಲ ಸಂತ ರೀಟಾ ಹೈಸ್ಕೂಲ್ ನ ಇಬ್ಬರು ವಿದ್ಯಾರ್ಥಿನಿಯರು ಪಡೆದ್ದಿದ್ದಾರೆ.

ಕ್ರಿಸ್ಟಲ್ ಜ್ಯೋತಿ ಲೋಬೋ ಹಾಗೂ ಪ್ರಣಮ್ಯ ಬಿ ಶೆಟ್ಟಿ ಇಬ್ಬರು ವಿದ್ಯಾರ್ಥಿನಿಯರು 625 ರಲ್ಲಿ 622 ಅಂಕ ಪಡೆದಿದ್ದು, ಕ್ರಿಸ್ಟಲ್ ಜ್ಯೋತಿ ಲೋಬೋ ಇವರು ಕ್ಲೋಡಿ ಲೋಬೋ ಮತ್ತು ಜೇಸಿಂತಾ ಲೋಬೋ ದಂಪತಿಗಳ ಪುತ್ರಿಯಾಗಿದ್ದಾಳೆ. ಪ್ರಣಮ್ಯ ಬಿ ಶೆಟ್ಟಿ ಇವರು ಬಾಲಕೃಷ್ಣ ಶೆಟ್ಟಿ ಮತ್ತು ಲೀಲಾಮಣಿ ದಂಪತಿಗಳ ಪುತ್ರಿ.

ಸಂತ ರೀಟಾ ಹೈಸ್ಕೂಲ್ ನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರ ಸಾಧನೆಗೆ ಸಂತ ರೀಟಾ ಹೈಸ್ಕೂಲ್ ನ ಶಾಲೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

145 ವಿದ್ಯಾರ್ಥಿಗಳಿಗೆ 625 ಕ್ಕೆ 625 ಅಂಕ; ವಿದ್ಯಾರ್ಥಿನಿಯರೇ ಮೇಲುಗೈ

ಈ ಶಾಲೆಯಲ್ಲಿ 89 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶಾಲೆ 100% ಫಲಿತಾಂಶ ದಾಖಲಿಸಿದೆ. 29 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 48೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 2 ವಿದ್ಯಾರ್ಥಿಗಳು ದ್ವೀತಿಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

- Advertisement -

Related news

error: Content is protected !!