Tuesday, June 23, 2026
spot_imgspot_img
spot_imgspot_img

ವಿವಾದದ ನಡುವೆಯೇ ನಡೆಯಿತು ಸ್ವಯಂ ವಿವಾಹ; ತನ್ನನ್ನು ತಾನೇ ಮದುವೆಯಾದ ಗುಜರಾತ್ ಬೆಡಗಿ

- Advertisement -
- Advertisement -

ಗುಜರಾತ್: ಗುಜರಾತ್ ವಡೋದರಾದ ಯುವತಿ ಕ್ಷಮಾ ಬಿಂದು ಸ್ವಯಂ ವಿವಾಹ ಗುರುವಾರ ನಿರ್ವಿಘ್ನವಾಗಿ ನೆರವೇರಿದೆ. ಆ ಮೂಲಕ ಭಾರತದಲ್ಲಿ ಪ್ರಥಮ ಸ್ವಯಂ ವಿವಾಹ ಪ್ರಕರಣವೊಂದು ನಡೆದಂತಾಗಿದೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ತನ್ನನ್ನು ತಾನು ಸಂಪ್ರದಾಯ ಬದ್ಧವಾಗಿ ವಿವಾಹ ಮಾಡಿಕೊಳ್ಳುವುದಾಗಿ ಘೋಷಿಸಿದ ಕ್ಷಮಾ ಬಿಂದು ದೇಶಾದ್ಯಂತ ಸಂಚಲನ ಉಂಟು ಮಾಡಿದ್ದಳು. ಜೂನ್ 11ರಂದು ಎಲ್ಲಾ ಸಂಪ್ರದಾಯಗಳನ್ನು ಪಾಲಿಸಿಕೊಂಡು ಸ್ವಯಂ ವಿವಾಹ ಬಂಧನಕ್ಕೆ ಒಳಗಾಗಲಿರುವುದಾಗಿ ಆಕೆ ಹೇಳಿಕೊಂಡಿದ್ದಳು. ದೇವಳದಲ್ಲಿ ಮದುವೆಯಾಗುವ ಆಕೆಯ ಮನದಾಸೆಗೆ ಬಿಜೆಪಿಯಿಂದ ಅಡ್ಡಿಯೂ ಉಂಟಾಗಿತ್ತು. ಹಿಂದೂ ಸಂಪ್ರದಾಯ ಪ್ರಕಾರ ಸ್ವಯಂ ವಿವಾಹ ಮಾಡಿಕೊಳ್ಳಲು ಅವಕಾಶವಿಲ್ಲ ಎಂಬ ಕಾರಣಕ್ಕಾಗಿ ದೇವಳದಲ್ಲಿ ಮದುವೆಯಾಗಲು ಬಿಡುವುದಿಲ್ಲ ಎಂದು ಬಿಜೆಪಿ ನಾಯಕಿಯೊಬ್ಬರು ಹೇಳಿದ್ದರು. ಇದರಿಂದಾಗಿ ಎರಡು ದಿನ ಮುಂಚಿತವಾಗಿಯೇ ಕ್ಷಮಾ ಸ್ವಯಂ ವಿವಾಹ ನಡೆದಿದೆ.

ಈ ಮದುವೆಯಲ್ಲಿ ಕ್ಷಮಾ ಎಲ್ಲಾ ಸಂಪ್ರದಾಯಗಳನ್ನು ಪಾಲನೆ ಮಾಡಿದ್ದರು. ಹಳದಿ ಕಾರ್ಯಕ್ರಮ, ಮೆಹಂದಿಯೂ ಇತ್ತು. ವಿವಾಹದ ಬಳಿಕ ಎರಡು ವಾರ ಕಾಲ ಗೋವಾಗೆ ಹನಿಮೂನ್‌ಗೆ ತೆರಳುವುದಾಗಿ ಕ್ಷಮಾ ಹೇಳಿದ್ದರು.

ವಿವಾಹದ ಬಳಿಕ ಫೇಸ್ಬುಕ್‌ನಲ್ಲಿ ವೀಡಿಯೋವೊಂದನ್ನು ಹರಿಬಿಟ್ಟಿರುವ ಕ್ಷಮ, ಎಲ್ಲರ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ವಿವಾಹಕ್ಕೆ ಶುಭ ಕೋರಿದ ಎಲ್ಲರಿಗೂ ನಾನು ಕೃತಜ್ಞಳು ಎಂದು ಹೇಳಿದ್ದಾರೆ.

- Advertisement -

Related news

error: Content is protected !!