Saturday, August 8, 2026
spot_imgspot_img
spot_imgspot_img

ವಿಷಕಾರಿ ಗಿಡಮೂಲಿಕೆ ತಿಂದು ಬಾಲಕ ಸಾವು, ಮೂವರು ಬಾಲಕಿಯರು ಗಂಭೀರ

- Advertisement -
- Advertisement -

ವಿಷಕಾರಿ ಗಿಡಮೂಲಿಕೆ ಸೇವಿಸಿದ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿ, ಮೂವರು ಬಾಲಕಿಯರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ನಡೆದಿದೆ.

12 ವರ್ಷದ ಬಾಲಕ ಮೊಹಮ್ಮದ್ ಬಾಸಿತ್ ಎಂಬಾತ ಸಾವನ್ನಪ್ಪಿದ್ದರೆ, ಬಸಿತ್ ಸಹೋದರಿ ಶಬ್ನಮ್ (10) ಮತ್ತು ನೆರೆಹೊರೆಯ ಸಾನಿಯಾ ಬಾನೋ (10) ಮತ್ತು ರಜಿಯಾ ಬಾನೊ (8) ಗಂಭೀರ ಸ್ಥಿತಿಯಲ್ಲಿ ಅಸ್ವಸ್ಥರಾಗಿದ್ದಾರೆ.

ಬಟೋಟೆ ಪ್ರದೇಶದ ರಖ್ಜಾರೋಹ್ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಈ ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ ಯಾವುದೇ ಗಿಡಮೂಲಿಕೆಗಳನ್ನು ಸೇವಿಸಿ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜ್ಞೆ ತಪ್ಪಿ ಬಿದ್ದ ಮಕ್ಕಳನ್ನು ಬಟೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಬಳಿಕ ವಿಶೇಷ ಚಿಕಿತ್ಸೆಗಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!