- Advertisement -
- Advertisement -
ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಮೃತಪಟ್ಟಿದ್ದಾಳೆ. ರಾಯಚೂರಿನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸಾಯಿಕೀರ್ತನಾ ಎಂಬ 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.

ರಾಯಚೂರಿನ ಡಾ .ಪಠಾಣ್ ENT ನರ್ಸಿಂಗ್ ಹೋಮ್ನಲ್ಲಿ ಘಟನೆ ನಡೆದಿದೆ. ರಾಯಚೂರು ತಾಲೂಕಿನ ಕೊಸಗಿ ಗ್ರಾಮದ ಆಂಜಿ ಮತ್ತು ಜ್ಯೋತಿ ದಂಪತಿ ಪುತ್ರಿ ಸಾಯಿಕೀರ್ತನಾ. ಆಂಜಿ, ಜ್ಯೋತಿ ದಂಪತಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಾಯಿಕೀರ್ತನಾಗೆ ಮಾತು ಬಾರದಿದ್ದರಿಂದ ಕಳೆದ ವರ್ಷ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಮತ್ತೆ, ಧ್ವನಿ ಹೋಗಿದ್ದರಿಂದ ಸಾಯಿಕೀರ್ತನಾಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ವೇಳೆ ಸಾಯಿಕೀರ್ತನಾ ಸಾವನ್ನಪ್ಪಿದ್ದಾಳೆ. ಇದೀಗ ಡಾ. ಪಠಾಣ್ ENT ನರ್ಸಿಂಗ್ ಹೋಮ್ ವಿರುದ್ಧ ಮೃತ ಸಾಯಿಕೀರ್ತನಾ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -








