Thursday, July 3, 2025
spot_imgspot_img
spot_imgspot_img

ಶೀಲ ಶಂಕಿಸಿ ಬರ್ಬರವಾಗಿ ಹತ್ಯೆ ಮಾಡಿದ ಪತಿರಾಯ

- Advertisement -
- Advertisement -

ರಾಮನಗರ: ಪತ್ನಿಯ ಶೀಲ ಶಂಕಿಸಿ ಪತಿ, ಆಕೆಯನ್ನು ಹತ್ಯೆ ಮಾಡಿರುವ ಘಟನೆ ರಾಮನಗರದ ರೆಹಮಾನಿಯಾ ನಗರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಮಾಬೀನಾ ಬಾನು ಪತಿಯಿಂದ ಕೊಲೆಯಾದ ಮಹಿಳೆ, ಪತಿ ಬಶೀರ್ ಪಾಷಾ ಈಕೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

ದಂಪತಿ ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಬಶೀರ್ ಪಾಷಾ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ. ದಂಪತಿ ಇಪ್ಪತ್ತು ದಿನಗಳ ಹಿಂದಯಷ್ಟೇ ರಾಮನಗರದಲ್ಲಿ ಬಾಡಿಗೆ ಮನೆ ಮಾಡಿ ಜೀವನ ಆರಂಭಿಸಿದರು. ಆದರೆ,ಭನುವಾರ ರಾತ್ರಿ ಬಶೀರ್‍ ಪಾಷಾ ಏಕಾಏಕಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!