Wednesday, September 9, 2026
spot_imgspot_img
spot_imgspot_img

ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಯುಧಪೂಜೆ ಸಂಭ್ರಮ; ಪಿಂಕ್ & ವೈಟ್ ಡ್ರೆಸ್ ಕೋಡ್ ನಲ್ಲಿ ಮಿಂಚಿದ ಪೊಲೀಸರು

- Advertisement -
- Advertisement -

ಪುತ್ತೂರು: ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಅ. 4 ರಂದು ಸಂಜೆ ನಡೆಯಿತು. ಪುರೋಹಿತರಾದ ಸಂದೀಪ್ ಕಾರಂತ್ ರವರು ಪೂಜಾ ವಿಧಿ ನಡೆಸಿಕೊಟ್ಟರು.

ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿಶಕುಂತಳಾ ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಗಣ್ಯರಾದ ಬೂಡಿಯಾರ್ ರಾಧಾಕೃಷ್ಣ ರೈ ಹೇಮನಾಥ ಶೆಟ್ಟಿ ಕಾವು, ಅನಿತಾ ಹೇಮನಾಥ ಶೆಟ್ಟಿ, ಮುರಳೀಕೃಷ್ಣ ಭಟ್ ಹಸಂತಡ್ಕ, ಶಿವರಾಮ ಆಳ್ವ, ಕಡಮಜಲು ಸುಭಾಸ್ ರೈ, ಸೀತಾರಾಮ ರೈ ತಿಂಗಳಾಡಿ, ಕೃಷ್ಣಕುಮಾರ್ ರೈ ತಿಂಗಳಾಡಿ, ಸಹಜ್ ಜೆ. ರೈ, ನವೀನ್ ಪಡೂರು, ಪ್ರಕಾಶ್ ರೈ ಬೈಲಾಡಿ, ಸದಾಶಿವ ರೈ ಸೂರಂಬೈಲು, ರತನ್ ರೈ ಕರ್ನೂರು, ನಿಹಾಲ್ ರೈ ಪುರಂದರ ರೈ ಮಿತ್ರಂಪಾಡಿ, ಮಾಧವ ಪೂಜಾರಿ ಕೆಯ್ಯರು ಮತ್ತಿತರರು ಆಗಮಿಸಿದರು. ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ, ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಭೇಟಿ ನೀಡಿದರು. ಠಾಣಾ ಸಬ್ ಇನ್ಸ್‌ಪೆಕ್ಟರ್ ಗಳಾದ ಉದಯರವಿ ಎಂ.ವೈ., ಹೆಚ್ಚುವರಿ ಎಸ್‌ಐ ರಾಮಕೃಷ್ಣ ನೇತೃತ್ವದಲ್ಲಿ ಪೊಲೀಸ್ ಸಿಬಂದಿಗಳಾದ ಹರ್ಷಿತ್, ಪ್ರವೀಣ್ ರೈ, ಮುರುಗೇಶ್, ವರ್ಗೀಸ್, ಹರೀಶ್ ಗೌಡ ಸೇರಿದಂತೆ ಪೊಲೀಸ್ ಸಿಬಂದಿಗಳು ಸಹಕರಿಸಿದರು.

ಪಿಂಕ್ & ವೈಟ್ ನಲ್ಲಿ ಸಂಭ್ರಮಿಸಿದ ಪೊಲೀಸರುಸದಾ ಖಾಕಿಯಲ್ಲಿ ಕಾಣುವ ಪೊಲೀಸರು ಆಯುಧ ಪೂಜಾ ಸಲುವಾಗಿ ಪಿಂಕ್ ಶರ್ಟ್ ಮತ್ತು ವೈಟ್ ಪಂಚೆಯಲ್ಲಿ ಕಾಣಿಸಲ್ಪಟ್ಟರು. ಮಹಿಳಾ ಸಿಬಂದಿಗಳು ಪಿಂಕ್ ಸ್ಯಾರಿಯುಟ್ಟು ಸಂಭ್ರಮಿಸಿದರು.

- Advertisement -

Related news

error: Content is protected !!