Monday, July 7, 2025
spot_imgspot_img
spot_imgspot_img

‘ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ’; ಬಿಜೆಪಿ ಸಂಸದರಿಗೆ ಮೋದಿ ಸೂಚನೆ

- Advertisement -
- Advertisement -

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ವಿರೋಧ ಪಕ್ಷಗಳನ್ನು ಎದುರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸಂಸದರಿಗೆ ಮತ್ತು ಮುಖಂಡರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ವಿರೋಧ ಪಕ್ಷಗಳ ಟೀಕೆಗೆ ಸಮರ್ಥ ಉತ್ತರ ನೀಡಲು ಮತ್ತು ಸರ್ಕಾರದ ಪ್ರತಿ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಬೇಕು. ಮೈಕ್ರೋಬ್ಲಾಗಿಂಗ್ ಸೈಟ್‌ಗಳು ಸೇರಿದಂತೆ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ. ವಿರೋಧ ಪಕ್ಷಗಳ, ಮುಖ್ಯವಾಗಿ ಆಮ್ ಆದ್ಮಿ ಪಕ್ಷದ ವಿರೋಧಗಳನ್ನು ಎದುರಿಸಲು ಸಾಮಾಜಿಕ ಜಾಲತಾಣ ಬಳಕೆ ಅಗತ್ಯವಾಗಿದೆ ಎಂದವರು ಹೇಳಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ತಂಡವು ಬಿಜೆಪಿ ಸಂಸದರ ಮತ್ತು ಪಕ್ಷದ ಹಿರಿಯ ನಾಯಕರ ಟ್ವೀಟ್‌ಗಳನ್ನು ನಿರಂತರ ಮೌಲ್ಯಮಾಪನ ಮಾಡುತ್ತಿದೆ. ಸರ್ಕಾರದ ಕಾರ್ಯಗಳು ಮತ್ತು ಜನರಿಗಾಗಿ ಪಕ್ಷದ ನೀತಿಗಳನ್ನು ಸಾಮಾಜಿಕ ತಾಣಗಳ ಮುಖಾಂತರ ಜನಮನ ತಲುಪಿಸುವಂತೆ ಅವರು ಪದೇಪದೇ ಸೂಚನೆ ನೀಡುತ್ತಲೇ ಬಂದಿರುವುದು ವಿಶೇಷ.

vtv vitla
vtv vitla
- Advertisement -

Related news

error: Content is protected !!